ಬೆಂಗಳೂರು : ಬಿಬಿಎಂಪಿ ಪೋರ್ಟಲ್ ನಲ್ಲಿ ನೀರಿನ ಟ್ಯಾಂಕರ್ ನೋಂದಣಿಗೆ ಇಂದು ಕೊನೆಯ ದಿನವಾಗಿದೆ. ಇದುವರೆಗೆ ನೋಂದಣಿ ಮಾಡದ ಮಾಲೀಕರಿಗೆ ಇದು ಕೊನೆ ಅವಕಾಶವಾಗಿದೆ.
ಮಾರ್ಚ್ 15ರ ಒಳಗೆ ನೀರಿನ ಟ್ಯಾಂಕರ್ ನೋಂದಣಿ ಮಾಡಿಕೊಳ್ಳದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ನೋಂದಣಿ ಮಾಡಿಕೊಂಡ ಟ್ಯಾಂಕರ್ಗಳಿಗೆ ಬಿಬಿಎಂಪಿಯ ಸ್ಟಿಕ್ಕರ್ ಅಂಟಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಹಾಗೂ, ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದರೆ ದಂಡ ವಿಧಿಸುವುದಾಗಿ ಆದೇಶಿಸಲಾಗಿದೆ. ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಂಡುಬಂದರೆ, ನಾಳೆಯಿಂದ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸ್ಥಳ ದಂಡ ಶುಲ್ಕದ ನಮೂನೆಯನ್ನು ಸಿದ್ಧಪಡಿಸಲಾಗುತ್ತಿದೆ. ಸಾರ್ವಜನಿಕರು 1916 ಸಹಾಯವಾಣಿಗೂ ಕರೆ ಮಾಡಿ ನೀರಿನ ದುರ್ಬಳಕೆ ಬಗ್ಗೆ ಮಾಹಿತಿ ನೀಡಬಹುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ಸಂಪ್ಗಳಿಗೆ ಮತ್ತು ಅನ್ಯ ಉದ್ದೇಶಗಳಿಗೆ ಸಂಸ್ಕರಿಸಿದ ನೀರನ್ನು ನೀಡಲಿದ್ದು, ಟ್ಯಾಂಕರ್ಗೆ ತುಂಬಿಸಿಕೊಂಡು ಹೋಗಬಹುದು. ಇದಕ್ಕಾಗಿ ಮೊಬೈಲ್ ತಂತ್ರಾಂಶವನ್ನು ರೂಪಿಸಲಾಗುತ್ತಿದ್ದು, ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.