ಬೆಂಗಳೂರು: 3 ದಿನಗಳವರೆಗೆ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2025 ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಈ ಸಮ್ಮಿಟ್‌ಗೆ 92 ಸಾವಿರಕ್ಕೂ ಅಧಿಕ ವೀಕ್ಷಕರು ಭೇಟಿ ನೀಡಿದ್ದಾರೆ. 57ಕ್ಕೂ ಹೆಚ್ಚು ದೇಶಗಳ 20,680 ಪ್ರತಿನಿಧಿಗಳು ವಿವಿಧ ಸಮ್ಮೃಳನಗಳಲ್ಲಿ ಭಾಗವಹಿಸಿದ್ದು, ಉದ್ದಿಮೆ ಸಂದರ್ಶಕರು ವಹಿವಾಟು ವೃದ್ಧಿ ಅವಕಾಶಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
100 ವಿಚಾರಗೋಷ್ಠಿಗಳಲ್ಲಿ ಉದ್ಯಮದ 630ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು, ಭಾಷಣಕಾರರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 1,015 ಪ್ರದರ್ಶಕರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಿದ್ದಾರೆ. ವಿವಿಧ ವರ್ಗಗಳ ಅಡಿಯಲ್ಲಿ ಪ್ರದರ್ಶಕ ಮಳಿಗೆಗಳಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.
