ಬೈಕ್ ನಲ್ಲಿ ತೆರಳುತ್ತಾ ಜನರು, ವಾಹನಗಳ ಮೇಲೆ ಪಾಟಾಕಿ ಎಸೆದು ಕಿಡಿಗೇಡಿಗಳ ಹುಚ್ಚಾಟ: ಇಬ್ಬರು ಅರೆಸ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಸಡಗರದ ನಡುವೆ ಕಿಡಿಗೇಡಿಗಳ ಹುಚ್ಚಾಟ ಮಿತಿ ಮೀರಿದೆ. ಬೈಕ್ ನಲ್ಲಿ ಬಂದ ಪುಂಡರು ರಸ್ತೆಯಲ್ಲಿ ನಿಂತಿದ್ದ ಜನರ ಬಳಿ, ವಾಹನಗಳ ಮೇಲೆ ಪಟಾಕಿ ಎಸೆದು ಪುಂಡಾಟ ಮೆರೆದಿರುವ ಘಟನೆ ನಡೆದಿದೆ.

ಬೈಕ್ ನಲ್ಲಿ ಬಂದಿರುವ ಇಬ್ಬರು ಕಿಡಿಗೇಡಿಗಳು, ತಮ್ಮ ಕೈಯಲ್ಲಿದ್ದ ಪಟಾಕಿಗೆ ಕಿಡಿ ಹೊತ್ತಿಸಿ ರಸ್ತೆ ಬದಿ ನಿಂತಿದ್ದವರ ಬಳಿ, ವಾಹನಗಳ ಬಳಿ ಎಸೆದು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ. ಅಲ್ಲದೇ ಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿದ್ದರೆ ಅವರ ಬಳಿಯೂ ಪಟಾಕಿ ಎಸೆದು ಹುಚ್ಚಾಟ ನಡೆಸಿದ್ದಾರೆ.

ಮುಖ್ಯರಸ್ತೆಯಲ್ಲಿ ವಾಹನ ಸಂಚರಿಸುತ್ತಿದ್ದರೆ, ಅವುಗಳ ಪಕ್ಕದಲ್ಲಿಯೂ ಪಟಾಕಿ ಎಸೆದು ಹೋಗಿದ್ದಾರೆ. ಬೆಂಗಳೂರಿನ ಹೆಚ್ ಬಿಆರ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಕಾರಿನ ಡ್ಯಾಶ್ ಕ್ಯಾಮರದಲ್ಲಿ ಯುವಕರ ಹುಚ್ಚಾಟ ಸೆರೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಹೆಣ್ಣೂರು ಪೊಲೀಸರು ಕಿಡಿಗೇಡಿಗಳನ್ನು ಪತ್ತೆ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read