ಪ್ರಯಾಣಿಕರ ಕೊರತೆ ಹಿನ್ನೆಲೆ ಬೆಂಗಳೂರು- ಪಂಢರಾಪುರ ರೈಲು ಸಂಚಾರ ಸ್ಥಗಿತ

ಬೆಂಗಳೂರು: ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಬೆಂಗಳೂರು -ಪಂಢರಾಪುರ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಎಸ್ಎಂವಿಟಿ ಯಿಂದ ಸಂಚರಿಸುತ್ತಿದ್ದ ಬೆಂಗಳೂರು ಹಾಗೂ ಪಂಢರಾಪುರ ವಿಶೇಷ ರೈಲನ್ನು ಪ್ರಯಾಣಿಕರ ಕೊರತೆ ಕಾರಣಕ್ಕೆ ರದ್ದುಪಡಿಸಿರುವುದಾಗಿ ನೈರುತ್ಯ ರೈಲ್ವೆ ತಿಳಿಸಿದೆ.

ಎಸ್ಎಂವಿಟಿ ಪಂಢರಾಪುರ ಸ್ಪೆಷಲ್ ಎಕ್ಸ್ ಪ್ರೆಸ್ ಜುಲೈ 5, 6, 7ರಂದು, ಪಂಢರಾಪುರ -ಎಸ್ಎಂವಿಟಿ ಬೆಂಗಳೂರು ಸ್ಪೆಷಲ್ ಎಕ್ಸ್ ಪ್ರೆಸ್ ರೈಲು ಜುಲೈ 6, 7, 8ರಂದು ರದ್ದಾಗಿದೆ.

ಸೇಲಂ ವಿಭಾಗದಲ್ಲಿ ಸುರಕ್ಷತಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎರ್ನಾಕುಲಂ -ಕೆಎಸ್ಆರ್ ಬೆಂಗಳೂರು ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲನ್ನು ಸುಮಾರು 20 ದಿನ ಮಾರ್ಗ ಬದಲಾವಣೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read