BREAKING: ಹೈವೇ ಟೋಲ್ ಸಂಗ್ರಹ ಮಾ. 14 ಕ್ಕೆ ಮುಂದೂಡಿಕೆ, ವಿರೋಧ ಹಿನ್ನಲೆ ಶುಲ್ಕ ಕಡಿಮೆ ಸಾಧ್ಯತೆ

ಬೆಂಗಳೂರು: ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಇಂದಿನಿಂದಲೇ ಟೋಲ್ ಸಂಗ್ರಹಿಸುವುದಿಲ್ಲ. ಹೈವೇನಲ್ಲಿ ಟೋಲ್ ಸಂಗ್ರಹವನ್ನು ಮಾರ್ಚ್ 14ಕ್ಕೆ ಮುಂದೂಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ.ಟಿ. ಶ್ರೀಧರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಇಂದಿನಿಂದ ಸವಾರರಿಂದ ಟೋಲ್ ಸಂಗ್ರಹಕ್ಕೆ ನಿರ್ಧಾರ ಮಾಡಲಾಗಿತ್ತು. ರಾಮನಗರ ತಾಲೂಕಿನ ಕಣಮಿಣಕೆ, ಶೇಷಗಿರಿಹಳ್ಳಿ ಟೋಲ್ ಗಳಲ್ಲಿ ಟೋಲ್ ಸಂಗ್ರಹಿಸುವುದಾಗಿ ಹೇಳಲಾಗಿತ್ತು.

ಉದ್ಘಾಟನೆಗೂ ಮೊದಲೇ ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಮುಂದೂಡಲಾಗಿದೆ. ಮಾರ್ಚ್ 11ರಂದು ಪ್ರಧಾನಿ ಮೋದಿ ದಶಪಥ ಹೆದ್ದಾರಿ ಉದ್ಘಾಟಿಸಲಿದ್ದಾರೆ.

ಶುಲ್ಕ ದುಬಾರಿ ಎನ್ನುವ ದೂರು ಹಿನ್ನೆಲೆ ದರ ಹೆದ್ದಾರಿ ಪ್ರಾಧಿಕಾರದಿಂದ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ನಿರ್ದೇಶಕ ಶ್ರೀಧರ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.

ಮೈಸೂರು ಮತ್ತು ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರು, ಸೇವಾ ರಸ್ತೆಗಳು ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read