ಪ್ರಿಯಕರನ ಜೊತೆಗಿದ್ದಾಗಲೇ ಸಿಕ್ಕಿ ಬಿದ್ದ ಯುವತಿಯಿಂದ ಘೋರ ಕೃತ್ಯ: ಕತ್ತು ಹಿಸುಕಿ ತಾಯಿಯನ್ನೇ ಕೊಂದ ಪುತ್ರಿ

ಬೆಂಗಳೂರು: ಸ್ನೇಹಿತನ ಜೊತೆ ಸೇರಿ ಪುತ್ರಿಯೇ ತಾಯಿಯನ್ನು ಕೊಲೆ ಮಾಡಿದ್ದಾಳೆ. ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉಸಿರುಗಟ್ಟಿಸಿ 46 ವರ್ಷದ ಜಯಲಕ್ಷ್ಮಿ ಅವರನ್ನು ಪುತ್ರಿ ಕೊಲೆ ಮಾಡಿದ್ದಾಳೆ. ಎರಡು ದಿನಗಳ ಹಿಂದೆ ಸ್ನೇಹಿತ ನವನೀಶ್ ಜೊತೆ ಸೇರಿ ಪುತ್ರಿ ಕೃತ್ಯ ಎಸಗಿದ್ದಾಳೆ. ಜಯಲಕ್ಷ್ಮಿ ದಿನಸಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು.

ಇತ್ತೀಚೆಗೆ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದಳು. ನಂತರ ತಾಯಿ ಮನೆಗೆ ಬಂದಾಗ ಇಬ್ಬರ ಸಂಬಂಧದ ಬಗ್ಗೆ ಗೊತ್ತಾಗಿದೆ. ಈ ವೇಳೆ ತಾಯಿ ಮಗಳ ಮಧ್ಯೆ ಜಗಳ ನಡೆದು ಜಯಲಕ್ಷ್ಮಿ ಕೊಲೆ ಮಾಡಲಾಗಿದೆ.

ಬಾತ್ ರೂಂನಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಮೃತದೇಹ ನೋಡಿ ಬೊಮ್ಮನಹಳ್ಳಿ ಠಾಣೆ ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಮಾಡಿದ್ದಾರೆ ಎನ್ನುವುದು ದೃಢಪಟ್ಟಿತ್ತು. ಹೀಗಾಗಿ ತಾಯಿಯನ್ನು ಕೊಂದ ಪುತ್ರಿ ಪವಿತ್ರಾ ಮತ್ತು ಸ್ನೇಹಿತ ನವನೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read