ಅಬುಧಾಬಿ ಲಾಟರಿ ಶೋನಲ್ಲಿ ಬರೋಬ್ಬರಿ 44 ಕೋಟಿ ರೂ. ಗೆದ್ದ ಬೆಂಗಳೂರು ವ್ಯಕ್ತಿ

lottery

ಅಬುಧಾಬಿಯ ಜನಪ್ರಿಯ ಸೀರೀಸ್ 250 ಬಿಗ್ ಟಿಕೆಟ್ ಲೈವ್‌ ಡ್ರಾ ಲಾಟರಿಯಲ್ಲಿ ಬೆಂಗಳೂರು ಮೂಲದ ಅರುಣ್ ಕುಮಾರ್‌ ವಟಕ್ಕೇ ₹44,75,00,000 ಗಳ ಬಹುಮಾನ ಗೆದ್ದಿದ್ದಾರೆ.

ಜಗತ್ತಿನಾದ್ಯಂತ ಜನರು ಲಾಟರಿ ಟಿಕೆಟ್‌ಗಳನ್ನು ಖರೀದಿಸಬಹುದಾಗಿದ್ದು, ನೇರ ಪ್ರಸಾರದ ಸಂದರ್ಭದಲ್ಲಿ ಅವರು ಗೆದ್ದ ಹಣ ಹಾಗೂ ಲಕ್ಸೂರಿ ಕಾರುಗಳ ವಿವರಗಳನ್ನು ಬಿತ್ತರಿಸಲಾಗುವುದು. ಇದೀಗ ಅರುಣ್ ಕುಮಾರ್‌ ವಟಕ್ಕೆ ಕೊರೊತ್‌ ಅವರು 20 ದಶಲಕ್ಷ ದೋಹಾ (₹44,75,00,000) ಗೆದ್ದಿದ್ದಾರೆ.

ಗಲ್ಪ್ ನ್ಯೂಸ್ ಪ್ರಕಾರ, ತನ್ನ ಗೆಳೆಯರಿಂದ ಬಿಗ್ ಟಿಕೆಟ್ ಲೈವ್‌ ಬಗ್ಗೆ ಕೇಳಿ ತಿಳಿದುಕೊಂಡ ಅರುಣ್, ಆನ್ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಲು ಆರಂಭಿಸಿದ್ದರು. ಮಾರ್ಚ್ 22ರಂದು ಖರೀದಿ ಮಾಡಿದ ಟಿಕೆಟ್‌ಗೆ ಅರುಣ್‌ ಈ ಭಾರೀ ಮೊತ್ತ ಗೆದ್ದುಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read