SHOCKING NEWS: ಸಂಬಳ ಕೇಳಿದ್ದಕ್ಕೆ ನಗ್ನಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಮಾಡಿದ ದುರುಳ

ಬೆಂಗಳೂರು: ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಸಂಬಳ ಕೇಳಿದ್ದಕ್ಕೆ ಆತನನ್ನು ನಗ್ನಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ ಮೂಲದ ಶರೀಫ್ ಹಲ್ಲೆಗೊಳಗಾದವರು. ಉತ್ತರಹಳ್ಳಿಯ ಹಾಸಿಗೆ ವ್ಯಾಪಾರಿ ಶೇಕ್ಷಾವಾಲ ಈ ಕೃತ್ಯವೆಸಗಿದ್ದಾನೆ.

ಕೆಲಸ ಮಾಡಿದ್ದಕ್ಕೆ ಶರೀಫ್ ಸಂಬಳ ಕೇಳಿದ್ದು, ವೇತನ ಕೇಳಿದ್ದಕ್ಕಾಗಿ ಆತನನ್ನು ಹಿಡಿದು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿ, ಶೇಕ್ಷಾವಾಲಾ ವಿಡಿಯೋ ಮಾಡಿದ್ದಾನೆ.

ಶರೀಫ್ ಮೊದಲು ಶೇಕ್ಷಾವಾಲ ಬಳಿ ಕೆಲಸ ಮಾಡುತ್ತಿದ್ದರು. ಹಲವು ಬಾರಿ ಸಂಬಳ ಕೇಳಿದರೂ ಕೊಟ್ಟಿರಲಿಲ್ಲ. ಇದರಿಂದ ಬೇಸತ್ತ ಶರೀಫ್ ಕೆಲಸ ಬಿಟ್ಟು ಬಾಬು ಎಂಬುವವರ ಬಳಿ ಕೆಲಸಕ್ಕೆ ಸೇರಿದ್ದರು. ಕೆಲ ದಿನಗಳ ಬಳಿಕ ಫೋನ್ ಮಾಡಿ ಶೇಕ್ಷಾವಾಲಗೆ ಮಾಡಿದ ಕೆಲಸಕ್ಕೆ ಸಂಬಳ ಕೊಡುವಂತೆ ಕೇಳಿದ್ದರು. ಇದಕ್ಕೆ ಶರೀಫ್ ನನ್ನು ಕರೆಸಿಕೊಂಡು ಅಂಗಡಿಯ ಒಳಗೆ ಶಟರ್ ಬಂದ್ ಮಾಡಿ ಕೂಡಿಟ್ಟು ಬೆತ್ತದಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೇ ನಗ್ನಗೊಳಿಸಿ ಥಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಬಳಿಕ ತನ್ನ ತಾಯಿಯನ್ನು ಶರೀಒಹ್ ನಿಂದಿಸಿದ್ದಾನೆ ಎಂದು ಆರೋಪಿ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದಾನೆ. ಪೊಲೀಸರು ಶರೀಫ್ ನನ್ನು ಕರೆದು ಬುದ್ಧಿಹೇಳಿ ಕಳುಹಿಸಿದ್ದರು.

ಕೆಲ ದಿಗಳ ಬಳಿಕ ಶೇಕ್ಷಾವಾಲ ಶರೀಫ್ ನನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಸಿದ ಪೊಲೀಸರು ಶೇಕ್ಷಾವಾಲನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read