ಪೊಲೀಸ್ ಇರ್ತಾರೆ ನೋಡ್ಕೊಂಡ್ ಹೋಗಿ…… ವಾಹನ ಸವಾರರಿಗೆ ‘ಗೂಗಲ್ ಮ್ಯಾಪ್’ ನೀಡ್ತಿದೆ ಸೂಚನೆ….!

ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್‌ ನಿಯಮ ಕಟ್ಟುನಿಟ್ಟಾಗಿದೆ. ಹೆಲ್ಮೆಟ್‌ ಧರಿಸದೆ ಹೋಗುವ, ಸೀಟ್‌ ಬೆಲ್ಟ್‌ ಧರಿಸದ, ಲೈಸೆನ್ಸ್‌ ಇಲ್ಲದ ಹಾಗೂ ನಿಯಮ ಮೀರಿದ ಚಾಲಕರಿಗೆ ದಂಡ ವಿಧಿಸಲಾಗುತ್ತದೆ. ಪ್ರತಿ ದಿನ ಕೆಲ ಪ್ರದೇಶದಲ್ಲಿ ಟ್ರಾಫಿಕ್‌ ಪೊಲೀಸ್‌ ಕಡ್ಡಾಯವಾಗಿ ಇರ್ತಾರೆ. ಅನೇಕ ಬಾರಿ ನಾವು ಏನೇ ತಪ್ಪು ಮಾಡಿಲ್ಲವೆಂದ್ರೂ ಅವರ ಬಳಿ ವಾದ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇದ್ರಿಂದ ತಪ್ಪಿಸಿಕೊಳ್ಳಲು ಅನೇಕರು ಟ್ರಾಫಿಕ್‌ ಪೊಲೀಸ್‌ ಇಲ್ಲದ ಜಾಗ ಹುಡುಕ್ತಾರೆ. ಅದಕ್ಕೆ ಈಗ ಗೂಗಲ್‌ ಮ್ಯಾಪ್‌ ಸಹಾಯ ಮಾಡ್ತಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಬಳಕೆದಾರರೊಬ್ಬರು ಗೂಗಲ್‌ ಮ್ಯಾಪ್‌ ಸ್ಕ್ರೀನ್‌ ಶಾಟ್‌ ಹಾಕಿಕೊಂಡಿದ್ದಾರೆ. ಅದ್ರಲ್ಲಿ ಪೊಲೀಸ್‌ ಇರ್ತಾ ಎಂದು ಬರೆಯಲಾಗಿದೆ. ನೀವು ಗೂಗಲ್‌ ಮ್ಯಾಪ್‌ ಗೆ ಹೋಗಿ ಪೊಲೀಸ್‌ ಇರ್ತಾರೆ ಅಂತ ಟೈಪ್‌ ಮಾಡ್ತಿದ್ದಂತೆ ನಿಮಗೆ ಐದಾರು ಪ್ಲೇಸ್‌ ತೋರಿಸುತ್ತೆ. ನೀವು ಗಮ್ಯ ಸ್ಥಾನವನ್ನು ಬೇಗ ತಲುಪಬೇಕು, ಪೊಲೀಸ್‌ ಕೈಗೆ ಸಿಕ್ಕಿ ಬೀಳ್ಬಾರದು ಅಂದ್ರೆ ಈ ಜಾಗವನ್ನು ಅವೈಡ್‌ ಮಾಡ್ಬೇಕು. ಎಲ್ಲೆಲ್ಲಿ ಪೊಲೀಸರು ನಿಂತಿರುತ್ತಾರೆ ಎಂಬುದನ್ನು ಈ ಮ್ಯಾಪ್‌ ತೋರಿಸುತ್ತದೆ. ಮ್ಯಾಪ್‌ ಫೋಟೋ ಪೋಸ್ಟ್‌ ಮಾಡಿದ ವ್ಯಕ್ತಿ ಗೂಗಲ್‌ ನಲ್ಲಿ ಪೊಲೀಸ್‌ ಇರ್ತಾರೆ ಟೈಪ್‌ ಮಾಡಿ ನಂತ್ರ ನನಗೆ ಧನ್ಯವಾದ ಹೇಳಿ ಎಂದು ಶೀರ್ಷಿಕೆ ಹಾಕಿದ್ದಾರೆ. ಈತನ ಪೋಸ್ಟ್‌ ಗೆ ಸಾಕಷ್ಟು ಕಮೆಂಟ್‌ ಬಂದಿದೆ.

https://twitter.com/kiraataka_2/status/1810246513953517841?ref_src=twsrc%5Etfw%7Ctwcamp%5Etweetembed%7Ctwterm%5E1810246513953517841%7Ctwgr%5E31c572004e4b9ce2b60b083411c02e7c729a2c1e%7Ctwcon%5Es1_&ref_url=https%3A%2F%2Fwww.lokmatnews.in%2Fweird%2Fbengaluru-just-type-police-irt-find-out-where-the-police-is-from-google-map-now-there-will-be-no-challan-b674%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read