ಉಚಿತ ಐಸ್​ ಕ್ರೀಂ ಪಡೆಯಲು ಡ್ಯಾನ್ಸ್​ ಮಾಡಿದ ಸಿಲಿಕಾನ್​ ಸಿಟಿ ಮಂದಿ…..!

ಅಮೇರಿಕಾದಲ್ಲಿ ಆಚರಿಸುವ ರಾಷ್ಟ್ರೀಯ ಐಸ್‌ಕ್ರೀಮ್ ದಿನಾಚರಣೆಯನ್ನು ಭಾರತೀಯ ಬ್ರ್ಯಾಂಡ್‌ಗಳು ಸಹ ಆಚರಣೆ ಮಾಡುತ್ತವೆ. ಇತ್ತೀಚೆಗೆ ಬೆಂಗಳೂರಿನ ಜನಪ್ರಿಯ ಸಿಹಿತಿಂಡಿ ಮಳಿಗೆಯು ರಾಷ್ಟ್ರೀಯ ಐಸ್ ಕ್ರೀಮ್ ದಿನದ ವಿಶೇಷ ಆಫರ್‌ನ್ನು ಘೋಷಣೆ ಮಾಡಿತ್ತು. ಒಪನ್‌ ಆಗಿ ನೃತ್ಯ ಮಾಡಲು ಸಿದ್ಧರಿರುವ ಗ್ರಾಹಕರಿಗೆ ಉಚಿತ ಐಸ್ ಕ್ರೀಮ್ ಸ್ಕೂಪ್ ನೀಡಲಾಯಿತು.

ಅಮೇರಿಕಾದಲ್ಲಿ ಜುಲೈ ತಿಂಗಳ ಮೂರನೇ ಭಾನುವಾರದಂದು ರಾಷ್ಟ್ರೀಯ ಐಸ್ ಕ್ರೀಮ್ ದಿನವನ್ನಾಗಿ ಆಚರಿಸಲಾಗುತ್ತದೆ. 1984ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಬೆಂಗಳೂರಿನ ಕಾರ್ನರ್ ಹೌಸ್ ಸಿಹಿತಿಂಡಿ ಮಳಿಗೆಯಲ್ಲಿಯು ಸಹ ಇದೇ ಜುಲೈ 16 ರಂದು ನ್ಯಾಷನಲ್ ಐಸ್‌ ಕ್ರೀಮ್ ಡೇ ಆಚರಣೆ ಮಾಡಲಾಯಿತು.

ಮಳಿಗೆಯ ಇನ್‌ಸ್ಟಾ ಗ್ರಾಮ್ ಪೇಜ್‌ನಲ್ಲಿ ಉಚಿತ ಐಸ್ ಕ್ರೀಮ್ ಸ್ಕೂಪ್‌ಗಾಗಿ ಜನ ಡ್ಯಾನ್ಸ್ ಮಾಡುತ್ತಿರುವ ಸಿಸಿ ಟಿವಿ ವಿಡಿಯೋವನ್ನು ಶೇರ್ ಮಾಡಲಾಗಿದೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಇದೆಲ್ಲವೂ ಸಿಸಿ ಕ್ಯಾಮಾರದಲ್ಲಿ ರೆಕಾರ್ಡ್ ಆಗಿದೆ.

ಈ ಬಗ್ಗೆ ಕಾರ್ನರ್ ಹೌಸ್ ಸಂಸ್ಥೆ ತಮ್ಮ ಇನ್‌ಸ್ಟಾ ಗ್ರಾಮ್‌ ಪೇಜ್‌ನಲ್ಲಿ ಬರೆದುಕೊಂಡಿದ್ದು “ನಮ್ಮ ಕ್ಯಾಮೆರಾಗಳು ಉಚಿತ ಐಸ್ ಕ್ರೀಂಗಾಗಿ ನೃತ್ಯ ಮಾಡುವ ಜನರನ್ನು ಸೆರೆ ಹಿಡಿದಿದೆ, ಐಸ್‌ಕ್ರೀಮ್ ಕರಗೋದಕ್ಕೆ ಇದು ಸರಿಯಾದ ಪಾರ್ಟಿ ಎಂದು ಹೇಳಿದೆ. ಈ ಐಸ್ ಕ್ರೀಮ್ ದಿನವು ನಮ್ಮ ಇಂದಿರಾನಗರ ಶಾಖೆಯಲ್ಲಿ ಒಳ್ಳೆ ರೀತಿಯಲ್ಲಿ ನಡೆಯಿತು. ನಮ್ಮ ಔಟ್ಲೆಟ್‌ ಪರವಾಗಿ ನಿಮಗೆಲ್ಲರಿಗೂ ಪ್ರೀತಿ ಮತ್ತು ನಗುವಿನ ಸ್ಕೂಪ್‌ಗಳಿಂದ ಧನ್ಯವಾದಗಳು ಎಂದು ಹೇಳಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read