ಮದುವೆ ಮಂಟಪಕ್ಕೆ ಇ-ಸ್ಕೂಟರ್‌ನಲ್ಲಿ ಬಂದ ವರ

ಬೆಂಗಳೂರು: ಮದುವೆ ಮಂಟಪಕ್ಕೆ ವಧು, ವರರು ಕಾರ್, ಕುದುರೆ ಅಬ್ಬರದ ಸಂಗೀತ ಮೆರವಣಿಗೆಯೊಂದಿಗೆ ಆಗಮಿಸುವುದನ್ನು ನೋಡಿರುತ್ತೀರಿ.

ಆದರೆ ಬೆಂಗಳೂರಿನಲ್ಲಿ ವರನೊಬ್ಬ ಸಾಂಪ್ರದಾಯಿಕ ಕುದುರೆ ಮತ್ತು ಐಷಾರಾಮಿ ಕಾರನ್ನು ಬಿಟ್ಟು ಎಲೆಕ್ಟ್ರಿಕ್ ಬೈಕ್ ಆಯ್ಕೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವ್ಯಕ್ತಿ ತನ್ನ ಮದುವೆಗೆ ಕುದುರೆ ಸವಾರಿ ಮಾಡುವ ಬದಲು ಅಥರ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಬಂದಿದ್ದಾರೆ. ಬರಾತ್ ಅಥವಾ ವರನ ಪ್ರವೇಶ ಕೂಟದಲ್ಲಿ ವರ ಮತ್ತು ಇತರರು ಎಲೆಕ್ಟ್ರಿಕ್ ವಾಹನದ(EV) ಪಕ್ಕದಲ್ಲಿ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ.

ಪೀಕ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ಮೇ 13 ರಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. 46,000 ಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಅಥರ್ ಎನರ್ಜಿಯಲ್ಲಿ ಉದ್ಯೋಗಿಯಾಗಿರುವ ಇಂಡಸ್ಟ್ರಿಯಲ್ ಡಿಸೈನರ್ ದರ್ಶನ್ ಪಟೇಲ್ ಕಳೆದ ವಾರಾಂತ್ಯದಲ್ಲಿ ವಿವಾಹವಾದರು. ಅವರು ಇ-ಸ್ಕೂಟರ್ ಬಳಸಿದ್ದಾರೆ.

https://twitter.com/peakbengaluru/status/1789959850400629153

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read