Bengaluru : ಖಾಸಗಿ ಕಂಪನಿ ಟೆಕ್ಕಿ ಮೇಲೆ ಗ್ಯಾಂಗ್ ರೇಪ್ ? : ದೂರು ನೀಡಿದ ಯುವತಿ

ಬೆಂಗಳೂರು : ನನ್ನ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆಯಿದೆ. ತನಿಖೆ ಮಾಡಿ ಎಂದು ಯುವತಿಯೊಬ್ಬಳು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಯುವತಿ ಬೆಂಗಳೂರಿನ ಖಾಸಗಿ ಕಂಪನಿ ಟೆಕ್ಕಿ ಆಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನನಗೆ ಏನಾಗಿದೆ ಎಂಬುದು ಗೊತ್ತಿಲ್ಲ. ತನಿಖೆ ಮಾಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಡಿಸೆಂಬರ್ 12ರಂದು ಯುವತಿಯು ಕೋರಮಂಗಲ ಪಬ್ ಒಂದರಲ್ಲಿ ರಾತ್ರಿ ತೆರಳಿದ್ದಳ, ನಂತರ ಆಕೆಗೆ ಪ್ರಜ್ಞೆ ಬಂದಾಗ ಹಾಡುಗೋಡಿಯ ದೇವೇಗೌಡ ಲೇಔಟ್ ಬಳಿ ಇದ್ದಿದ್ದು ಆಕೆಗೆ ತಿಳಿದಿದೆ. ಪ್ರಜ್ಞೆ ಬಂದು ಮನೆಯೊಂದರ ಬಾಗಿಲು ಬಡಿದಿದ್ದಾಳೆ. ನಂತರ ಸ್ಥಳೀಯರು 112 ಗೆ ಕರೆ ಮಾಡಿದ್ದು, ಸ್ಥಳಕ್ಕೆ ಆಡುಗೋಡಿ ಪೊಲೀಸರು ಆಗಮಿಸಿದ್ದರು.ನಂತರ ಯುವತಿಯನ್ನು ಪೊಲೀಸರು ಕೋರಮಂಗಲ ಠಾಣೆಗೆ ಕರೆತಂದಿದ್ದಾರೆ.

ನಾನು ಇಲ್ಲಿ ಹೇಗೆ ಬಂದೆ ಅನ್ನೋದು ನನಗೆ ಗೊತ್ತಿಲ್ಲ ಪ್ರಜ್ಞಾಹೀನಳಾಗಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆದಿರುವ ಶಂಕೆ ಇದೆ, ಈ ಬಗ್ಗೆ ತನಿಖೆ ಮಾಡಿ ಎಂದು ಯುವತಿ ದೂರು ನೀಡಿದ್ದಾಳೆ. ಯುವತಿ ಹೇಳಿಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read