BREAKING NEWS: ಬೆಂಗಳೂರಿನಲ್ಲಿ ಕಾಲರಾ ಸೋಕು ಹೆಚ್ಚಳ; 14 ಪ್ರಕರಣಗಳು ದಾಖಲು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಬಿಸಿಲ ಝಳ. ಇನ್ನೊಂದೆದೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು ಜನರು ತತ್ತರಿಸುಇ ಹೋಗಿದ್ದಾರೆ. ಈ ನಡುವೆ ಕಾಲರಾ ಸೋಂಕು ಜನರನ್ನು ಹೈರಾಣಾಗಿಸುತ್ತಿದೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳು ಹೆಚ್ಚುತ್ತಿವೆ. ಈವರೆಗೆ 14 ಪ್ರಕರಣಗಳು ದಾಖಲಾಗಿದ್ದು, ವಾಂತಿ-ಭೇದಿ, ನಿರ್ಜಲೀಕರಣ, ಅತಿಸಾರದಿಂದಾಗಿ ಜನರು ಬಳಲುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಕಾಲರಾ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 5 ಪ್ರಕರಣ ಹಾಗೂ ರಾಮನಗರದಲ್ಲಿ 1 ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಒಂದೆಡೆ ತಾಪಮಾನ ಏರಿಕೆ, ನೀರಿನ ಸಮಸ್ಯೆ ನಡುವೆ ಕಾಲರಾ ಸೋಂಕು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read