ನೀವು ಪ್ರತಿದಿನ ಬಸ್ ನಲ್ಲಿ ಪ್ರಯಾಣಿಸ್ತೀರಾ ? ಹಾಗಾದ್ರೆ ಗಮನಿಸಿ ಮೇ 9 ಮತ್ತು 10 ರಂದು ಸಾರಿಗೆ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರಲ್ಲಿ ಸಾರ್ವಜನಿಕ ಸಾರಿಗೆ ಬಳಸುವ ಜನ ಮೇ 9 ಮತ್ತು 10 ರಂದು ಸ್ವಲ್ಪ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಚುನಾವಣಾ ಕರ್ತವ್ಯಗಳಿಗೆ ಸಾವಿರಾರು ಬಸ್‌ಗಳನ್ನು ನಿಯೋಜಿಸಿರುವುದರಿಂದ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಗಣನೀಯವಾಗಿ ವ್ಯತ್ಯಯವಾಗಲಿದೆ.

ಎರಡೂ ಸಾರಿಗೆ ಸಂಸ್ಥೆಗಳು ತಿಳಿಸಿರುವ ಪ್ರತ್ಯೇಕ ಹೇಳಿಕೆಗಳಲ್ಲಿ, ತಮ್ಮ ಗಮನಾರ್ಹ ಸಂಖ್ಯೆಯ ಬಸ್‌ಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಚುನಾವಣಾ ಕರ್ತವ್ಯಕ್ಕಾಗಿ ನೀಡಲಿವೆ. ಇದರಿಂದ ಮೇ 9 ಮತ್ತು 10ರಂದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು ಪ್ರಯಾಣಿಕರು ಮುನ್ನೆಚ್ಚರಿಕೆ ಕೈಗೊಳ್ಳಬೇಕಿದೆ.

ಮೇ 6 ರವರೆಗೆ ಕೆಎಸ್‌ಆರ್‌ಟಿಸಿಯ 3,700 ಮತ್ತು ಬಿಎಂಟಿಸಿಯ 1,868 ಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

NWKRT ಮತ್ತು KKRTC ತಮ್ಮಲ್ಲಿರುವ 9,100 ಬಸ್‌ಗಳಲ್ಲಿ 4,000 ಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ನೀಡಲಿವೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಸುಮಾರು 9 ಸಾವಿರಕ್ಕೂ ಹೆಚ್ಚು ಬಸ್ ಗಳನ್ನು ಚುನಾವಣಾ ಕರ್ತವ್ಯಕ್ಕೆ ನೀಡಲಿವೆ. ಹೀಗಾಗಿ ಮೇ 9 ರಂದು ಎಂದಿನಂತೆ ಬಸ್ ಸೌಲಭ್ಯ ಸುಲಭವಾಗಿ ಸಿಗದೇ ಜನ ತೊಂದರೆಗೀಡಾಗಬಹುದು. ಆದರೆ ಮೇ 10 ರಂದು ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಇರುವುದರಿಂದ ತೊಂದರೆ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read