ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿಯೇ ವಿಂಗ್ ಕಮಾಂಡರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಏರ್ ಪೋರ್ಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಶಿಲಾದಿತ್ಯ ಬೋಸ್ ಹಲ್ಲೆಗೊಳಗಾದ ವಿಂಗ್ ಕಮಾಂಡರ್. ಪತ್ನಿ ಜೊತೆ ಏರ್ ಪೋರ್ಟ್ ಗೆ ತೆರಳುತ್ತಿದ್ದ ವಿಂಗ್ ಕಮಾಂಡರ್ ಮೇಲೆ ಬೈಕ್ ಸವಾರನೊಬ್ಬ ಕಿರಿಕ್ ಮಾಡಿ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ.
ಶಿಲಾದಿತ್ಯ ಅವರ ಕಾರ್ ಮುಂದೆ ಬೈಕ್ ನಿಲ್ಲಿಸಿ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾನೆ. ಕಾರಿನ ಮೇಲಿದ್ದ ಡಿಆರ್ ಡಿಒ ಸ್ಟಿಕ್ಕರ್ ನೋಡಿ ಕೋಪಗೊಂಡು ಕಾರಿನ ಕೀ ಕಿತ್ತುಕೊಂಡು ಹಲ್ಲೆ ನಡೆಸಿದ್ದಾನೆ. ಬಳಿಕ ಒಂದಿಷ್ಟು ಜನರನ್ನು ಕರೆತಂದು ಮತ್ತೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ರಕ್ತಸೋರುತ್ತಿದ್ದರೂ ವಿಂಗ್ ಕಮಾಮ್ಡರ್ ಶಿಲಾದಿತ್ಯ ಘಟನೆಯ ವಿಡಿಯೋ ಮಾಡಿ ತನ್ನ ಮೇಲಿನ ಹಲ್ಲೆ ಬಗ್ಗೆ ಹೇಳಿಕೊಂಡಿದ್ದಾರೆ.