ಅಮೆರಿಕಾದ ಖ್ಯಾತ ಗಾಯಕಿ-ಗೀತ ರಚನೆಕಾರರಾದ ಕ್ರಿಸ್ಟಿನಾ ಪೆರ್ರಿ ಅವರ ಪ್ರಖ್ಯಾತ ಹಾಡು ‘ಎ ಥೌಸಂಡ್ ಇಯರ್ಸ್’ ಬೆಂಗಳೂರಲ್ಲಿ ಕೇಳಿಸಿದೆ.
ಬೆಂಗಳೂರಿನ ಆಟೋರಿಕ್ಷಾ ಡ್ರೈವರ್ ಒಬ್ಬರು ಈ ಹಾಡನ್ನ ತಮ್ಮ ಆಟೋದಲ್ಲಿ ಹಾಕಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ನೀರ್ಜಾ ಶಾ ಎಂಬುವವರು ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, “ಎಲ್ಲರೂ ಕ್ರಿಸ್ಟಿನಾ ಪೆರ್ರಿಯನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಪುರಾವೆ ! ಇದನ್ನು ವೀಕ್ಷಿಸಲು ಎಷ್ಟು ಸಂತೋಷವಾಗಿದೆ.” ಎಂದು ಪೋಸ್ಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಆಟೋ ಚಾಲಕ ಹೈ ಪಿಚ್‌ನಲ್ಲಿ ‘ಎ ಥೌಸಂಡ್ ಇಯರ್ಸ್’ ಹಾಡು ಹಾಕಿದ್ದಾರೆ. ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡ ವೇಳೆ ಮೋಜು ಮಸ್ತಿ ಮಾಡುತ್ತಾ ಹಾಡನ್ನು ಎಂಜಾಯ್ ಮಾಡಿದ್ದಾರೆ.
ಡಿಸೆಂಬರ್ 25 ರಂದು ವೀಡಿಯೊವನ್ನು ಹಂಚಿಕೊಂಡ ಬಳಿಕ 78,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಜನಪ್ರಿಯ ಹಾಡು ‘ಎ ಥೌಸಂಡ್ ಇಯರ್ಸ್’ ‘ದಿ ಟ್ವಿಲೈಟ್ ಸಾಗಾ: ಬ್ರೇಕಿಂಗ್ ಡಾನ್ ಭಾಗ 1’ ಚಲನಚಿತ್ರದ್ದು. ಕ್ರಿಸ್ಟನ್ ಸ್ಟೀವರ್ಟ್, ರಾಬರ್ಟ್ ಪ್ಯಾಟಿನ್ಸನ್ ಮತ್ತು ಟೇಲರ್ ಲಾಟ್ನರ್ ಇದರಲ್ಲಿ ನಟಿಸಿದ್ದಾರೆ.
https://twitter.com/Neerjargon/status/1739138117528113171?ref_src=twsrc%5Etfw%7Ctwcamp%5Etweetembed%7Ctwterm%5E1739138117528113171%7Ctwgr%5E3607e05221d6d80fd6c8dc8de6cdda0e056e1bd0%7Ctwcon%5Es1_&ref_url=https%3A%2F%2Fwww.hindustantimes.com%2Ftrending%2Funexpected-bengaluru-auto-driver-lip-syncing-christina-perris-song-goes-viral-watch-101703591826472.html