ಬೆಂಗಳೂರು: ಇತ್ತೀಚೆಗೆ ನಗದು ವ್ಯವಹಾರ ಡಿಜಿಟಲ್ ಆಗಿದೆ. ಬಹುತೇಕರು ಡಿಜಿಟಲ್ ಪಾವತಿ ಮುಖಾಂತರವೇ ವ್ಯವಹಾರ ಮಾಡುತ್ತಿದ್ದಾರೆ.
ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ಸ್ಮಾರ್ಟ್ ವಾಚ್‌ನಲ್ಲಿ ಕ್ಯೂಆರ್ ಕೋಡ್ ಮೂಲಕ ಪಾವತಿಯನ್ನು ಸ್ವೀಕರಿಸುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನಮ್ಮ ಯಾತ್ರಿ ಆಟೋದಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರು ತಮ್ಮ ಸ್ಥಳ ಬಂದಾಗ ಇಳಿದು ಹಣ ಪಾವತಿಸಲು ಆಟೋ ಚಾಲಕನಿಗೆ ಕ್ಯೂಆರ್ ಕೋಡ್ ಅನ್ನು ಕೇಳಿದ್ದಾರೆ.
ಈ ವೇಳೆ ಆಟೋ ಚಾಲಕ ತನ್ನ ಸ್ಮಾರ್ಟ್ ವಾಚ್ ಅನ್ನು ತೋರಿಸಿದ್ದಾರೆ. ಸ್ಮಾರ್ಟ್ ವಾಚ್ ನಲ್ಲಿ ಕ್ಯೂಆರ್ ಕೋಡ್ ಅನ್ನು ತನ್ನ ಸ್ಕ್ರೀನ್‌ಸೇವರ್ ಆಗಿ ಚಾಲಕ ಸೇವ್ ಮಾಡಿಕೊಂಡಿದ್ದಾರೆ.
ಸದಾ ಗದ್ದಲದಿಂದ ಕೂಡಿರುವ ಬೆಂಗಳೂರು ನಗರ ಹೊಸತನ ಮತ್ತು ಸೃಜನಶೀಲತೆಗೆ ಹೊಸದೇನಲ್ಲ. ಸದ್ಯ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ. ಬಳಕೆದಾರರು ಆಟೋ ಚಾಲಕನ ಬುದ್ಧಿವಂತಿಕೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
https://twitter.com/_waabi_saabi_/status/1691317941063524352?ref_src=twsrc%5Etfw%7Ctwcamp%5Etweetembed%7Ctwterm%5E1691317941063524352%7Ctwgr%5E6f0f2cc119939fb1a81f9a0fee278d39efb3d664%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fbengaluru-auto-driver-passenger-qr-code-smartwatch-payment-8894727%2F