ಬೆಂಗಳೂರು : 7ನೇ ತರಗತಿ ವಿದ್ಯಾರ್ಥಿಗಳಿಗೆ ನಟಿ ತಮನ್ನಾ ಬಗ್ಗೆ ಪಾಠ ! ಪೋಷಕರಿಂದ ತೀವ್ರ ವಿರೋಧ

ಬೆಂಗಳೂರು : ಶಾಲೆಯೊಂದರಲ್ಲಿ 7ನೇ ತರಗತಿ ವಿದ್ಯಾರ್ಥಿಗಳಿಗೆ ನಟಿ ತಮನ್ನಾ ಬಗ್ಗೆ ಪಠ್ಯವೊಂದನ್ನು ಅಳವಡಿಸಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಪೋಷಕರು ನಮ್ಮ ಮಕ್ಕಳು ತಮನ್ನಾ ಬಗ್ಗೆ ಪಾಠ ಕಲಿಬೇಕಾ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನ ಸಿಂಧಿ ಕಾಲೇಜಿನ ಪಠ್ಯೇತರ ಪಠ್ಯದಲ್ಲಿ ಈ ಪಾಠ ಅಳವಡಿಕೆ ಮಾಡಲಾಗಿದೆ. ಈ ಕುರಿತು ಕೆಲವು ಫೋಟೋಗಳು ವೈರಲ್ ಆಗಿದೆ, ಪಾಠದಲ್ಲಿ ತಮನ್ನ ಹುಟ್ಟಿದ್ದು , ಅವರು ನಟಿಸಿದ ಸಿನಿಮಾ ಇವುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸಿಂಧ್ ವಿಭಜನೆಯ ನಂತರ ಭಾರತೀಯರ ಜನಜೀವನ ಎಂಬ ವಿಷಯದಡಿ ತಮನ್ನಾ ಭಾಟಿಯಾ ಅವರ ಪಠ್ಯವನ್ನು ಅಳವಡಿಸಲಾಗಿದೆ.ಸಿಂಧ್ ಸಮುದಾಯ ಸಾಧಕರ ಪರಿಚಯಿಸಲು ಹೋಗಿ ಈ ಎಡವಟ್ಟು ಆಗಿದೆ..

ತಮನ್ನಾ ಪಠ್ಯ ಅಳವಡಿಕೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ನಮ್ಮ ಮಕ್ಕಳು ತಮನ್ನಾ ನೋಡಿ ಕಲಿಬೇಕಾ..? ಇಂತಹ ಪಾಠಗಳು ಏನು ಸಂದೇಶ ಕೊಡುತ್ತದೆ ಎಂದು ಪಾಲಕರು ಕಿಡಿಕಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read