BIG NEWS: ಬೆಂಗಳೂರಿನ 6 ರೈಲು ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆಗೆ ರೈಲ್ವೆ ಮಂಡಳಿ ಅನುಮೋದನೆ

ಬೆಂಗಳೂರು: ಪ್ರಯಾಣಿಕರ ಹಾಗೂ ಸರಕು ಸಾಗಣೆಯ ದೃಷ್ಟಿಯಿಂದ ಲೈನ್ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರಿನ 6 ರೈಲುಗಳಿಗೆ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಅಳವಡಿಸುವ ನೈಋತ್ಯ ರೈಲ್ವೆ ಇಲಾಖೆಯ ಪ್ರಸ್ತಾವನೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಬೆಂಗಳೂರು ನಗರ-ಯಶವಂತಪುರ-ಯಲಹಂಕ 17.75 ಕಿ.ಮೀ
ಯಶವಂತಪುರ-ಅರಸೀಕೆರೆ ವಿಭಾಗದಲ್ಲಿ 160.65 ಕಿ.ಮೀ
ಲೊಟ್ಟೆಗೊಲ್ಲಹಳ್ಳಿ-ಹೊಸೂರು ವಿಭಾಗದ 63.6 ಕಿ.ಮೀ
ವೈಟ್ ಫೀಲ್ಡ್-ಜೋಲಾರ್ ಪೇಟೆ ವಿಭಾಗ 119 ಕಿ.ಮೀ
ಬೈಯ್ಯಪ್ಪನಹಳ್ಳಿ-ಪೆನುಕೊಂಡ ವಿಭಾಗ ಚನ್ನಸಂಧ್ರ ಮಾರ್ಗವಾಗಿ 139.8 ಕಿ.ಮೀ
ಬೆಂಗಳೂರು ನಗರ-ಮೈಸೂರು 138.25 ಕಿ.ಮೀ – ಈ ಭಾಗದಲ್ಲಿ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಸಲಾಗುತ್ತಿದೆ.

ಹೆಚ್ಚಿನ ರೈಲುಗಳ ಸಂಚಾರಕ್ಕೆ ಅನುಕೂಲ ಆಗಲು ಹಾಗೂ ರೈಲು ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಬೆಂಗಳೂರಿನ 6 ಪ್ರಮುಖ ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 874 ಕೋಟಿ ವೆಚ್ಚವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read