ಬೆಂಗಳೂರು: ಬೆಂಗಳೂರಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಬಂಧಿತ ಆರೋಪಿ. ಸೆ.7ರಂದು ರಾತ್ರಿ ಜಕ್ಕೂರು ಮುಖ್ಯರಸ್ತೆಯಲ್ಲಿ ಶ್ವಾನಕ್ಕೆ ಅಪಘಾತವಾಗಿತ್ತು. ಈ ವೇಳೆ ಬಂದ ಯುವತಿ ತನ್ನ ಕಾರು ನಿಲ್ಲಿಸಿ ಶ್ವಾನದ ರಕ್ಷಣೆಗೆ ಮುಂದಾಗಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಕಾಮುಕನೊಬ್ಬ ಯುವತಿಗೆ ಬ್ಯಾಡ್ ಟಚ್ ಮಾಡಿ ತೆರಳಿದ್ದಾನೆ. ಕೈಗೆ ರಕ್ತವಾಗಿದ್ದರಿಂದ ಯುವತಿ ಪೆಟ್ರೋಲ್ ಬಂಕ್ ಬಳಿ ಕೈತೊಳೆಯುತ್ತಿದ್ದಿರು. ಸ್ವಲ್ಪ ಹೊತ್ತಿನಲ್ಲಿಯೇ ಮತ್ತೆ ಬಂದ ಆರೋಪಿ, ಯುವತಿಯ ಖಾಸಗಿ ಅಂಗ ಮುಟ್ಟಿ ಪರಾರುಯಾಗಿದ್ದ.
ಘಟನೆ ಬಗ್ಗೆ ಯುವತಿ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು. ಸದ್ಯ ಆರೋಪಿ ಮಂಜುನಾಥ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.