ALERT : ಬೆಂಗಳೂರಲ್ಲಿ ‘ಮದ್ರಾಸ್ ಐ ‘ಬೆನ್ನಲ್ಲೇ ಹೆಚ್ಚುತ್ತಿದೆ ‘ಪಿಂಕ್ ಐ ಸೋಂಕು’.! ಏನಿದರ ಲಕ್ಷಣಗಳು ತಿಳಿಯಿರಿ

ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳ ಹಿಂದಷ್ಟೇ ಮದ್ರಾಸ್ ಐ ಸೋಂಕು ಜನರನ್ನು ಕಾಡಿತ್ತು. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ಸೇರಿದಂತೆ ವಿವಿಧೆಡೆ ಪಿಂಕ್ ಐ ಸೋಂಕು ಹೆಚ್ಚುತ್ತಿದೆ.

ಬೆಂಗಳೂರಿನಲ್ಲಿ ಹಲವರು ಪಿಂಕ್ ಐ ಸಮಸ್ಯೆಯಿಂದ ಬಳಲುತ್ತಿದಾರೆ. ಡೆಂಘಿ, ಮದ್ರಾಸ್ ಐ ಬಳಿಕ ಬೆಂಗಳೂರಿನಲ್ಲಿ ಪಿಂಕ್ ಐ ಆರಂಭವಾಗಿದೆ. ಹೆಚ್ಚಾಗಿ ಮಕ್ಕಳಲ್ಲಿ ಪಿಂಕ್ ಐ ಕಾಣಿಸಿಕೊಳ್ಳುತ್ತಿದೆ.

ಬದಲಾಗುತ್ತಿರುವ ಹವಾಮಾನ ಪಿಂಕ್ ಐ ಕಾಯಿಲೆ ಹೆಚ್ಚಗಲು ಕಾರಣ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಈ ಸೋಂಕಿನಲ್ಲಿ ಕಣ್ರಪ್ಪೆ ಹಾಗೂ ಕಣ್ಣುಗುಡ್ದೆಯನ್ನು ಸುತ್ತಿವರಿದಿರುವ ಪಾರದರ್ಶಕ ಪೊರೆಯಾದ ಕಾಂಜಾಂಕ್ವಿವಾ ಊದಿಕೊಂಡು ಸೋಂಕ್ನಿಂದ ಕಣ್ನುಗಳು ಕೆಂಪಗಾಗುತ್ತಿವೆ. ಸೋಂಕಿತ ರಕ್ತನಾಳಗಳು ಊದಿಕೊಳ್ಲುತ್ತವೆ. ಇದರಿಂದ ಕಣ್ಣಿನ ಒಳಭಾಗಾದ ಬಿಳಿಭಾಗ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಇದು ವೈರಲ್ ಸೋಂಕಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಬೇಗನೇ ಹರಡುತ್ತದೆ.

ಇದು ಹೆಚ್ಚಾಗಿ ಶಾಲಾ ಮಕ್ಕಳಲ್ಲಿ ಕಂಡುಬರುತ್ತಿದೆ. ಮಕ್ಕಳಲ್ಲಿನ ಪಿಂಕ್ ಐ ಸಮಸ್ಯೆ ಪೋಷಕರನ್ನು ಆತಂಕಕ್ಕೀಡುಮಾಡಿದೆ.

ಲಕ್ಷಣಗಳು:
ಕಣ್ಣು ಕೆಂಪು ಅಥವಾ ಗುಲಾಬಿಯಾಗುವುದು, ತುರಿಕೆ

ಕಣ್ಣಿನಲ್ಲಿ ಅತಿಯಾದ ನೀರು ಸೋರುವುದು
ಕಣ್ಣುಗಳಲ್ಲಿ ಚುಚ್ಚಿದಂತಹ ಅನುಭವವಾಗುವುದು. ಇಂತಹ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷ ಮಾಡದೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read