ಬೆಂಗಳೂರು: ಹಾಡಹಗಲೇ ನಡುರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಬಳಿಯ ಸೋಮಣ್ಣ ಲೇಔಟ್ ನಲ್ಲಿ ನಡೆದಿದೆ.
ಗ್ಯಾಅಂಗ್ ವೊಂದು ಆಟೋ, ಕಾರಿನಲ್ಲಿ ಬಂದು ಯುವಕರ ಮೇಲೆ ಹಲ್ಲೆ ನಡೆಸಿದೆ. ಏಕಾಏಕಿ ಆಟೋ ಹಾಗೂ ಕಾರುಗಳಲ್ಲಿ ಬಂದ ಗ್ಯಾಂಗ್ ವೊಂದು ಸ್ಥಳದಲ್ಲಿದ್ದ ಯುವಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪುಂಡಾಟ ಮೆರೆದಿದೆ.
ಮನೆಗಳ ಮುಂದೆಯೇ, ಸಾರ್ವಜನಿಕವಾಗಿ ದುಷ್ಕರ್ಮಿಗಳು ಈ ರೀತಿ ಹಲ್ಲೆ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಎದುರಾಗಿದೆ. ಯುವಕರ ಹಲ್ಲೆ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.