ʼಸಿಬಿಐʼನಿಂದ ತಪ್ಪಿಸಿಕೊಳ್ಳಲು ಮೊಬೈಲ್‌ ಕೊಳಕ್ಕೆಸೆದ ಶಾಸಕ; ಹುಡುಕಾಟದಲ್ಲಿ ತೊಡಗಿದ ಅಧಿಕಾರಿಗಳು

ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ತಮ್ಮ ಮನೆಗೆ ರೇಡ್ ಮಾಡಿದ ವೇಳೆ ಟಿಎಂಸಿ ಶಾಸಕ ಜೀಬನ್ ಕೃಷ್ಣ ಸಾಹಾ ತಮ್ಮ ಬಳಿ ಇದ್ದ ಎರಡು ಮೊಬೈಲ್ ಫೋನ್‌ಗಳನ್ನು ಮನೆಯ ಪಕ್ಕದಲ್ಲಿದ್ದ ಕೊಳಕ್ಕೆ ಬಿಸಾಡಿದ್ದಾರೆ.

ಪಶ್ಚಿಮ ಬಂಗಾಳದ ಬುರ್ವಾನ್ ಕ್ಷೇತ್ರದ ಶಾಸಕ ಸಿಬಿಐ ಅಧಿಕಾರಿಗಳ ಕೈಯಲ್ಲಿದ್ದ ತಮ್ಮೆರಡು ಮೊಬೈಲ್‌ಗಳನ್ನು ಅವರಿಂದ ಕಸಿದುಕೊಂಡು ಕೂಡಲೇ ಪಕ್ಕದ ಕೊಳಕ್ಕೆ ಎಸೆದಿದ್ದಾರೆ. ಶಿಕ್ಷಕರ ನೇಮಕಾತಿ ಪ್ರಕರಣ ಸಂಬಂಧ ಜೀವನ್‌‌ರನ್ನು ಸಿಬಿಐ ತನಿಖೆಗೆ ಒಳಪಡಿಸಿದೆ.

ಈ ಡಿವೈಸ್‌ಗಳನ್ನು ಪತ್ತೆ ಮಾಡಲು ಶೋಧ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಟಿಎಂಸಿ ಶಾಸಕರ ಮನೆಯ ಬಳಿಯ ಈ ಕೊಳದಲ್ಲಿ ಆರು ಬ್ಯಾಗ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮುರ್ಶಿದಾಬಾದ್ ನಗರದಲ್ಲಿರುವ ಜೀಬನ್‌ ಮನೆಗೆ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಕೇಂದ್ರ ಭದ್ರತಾ ಪಡೆಗಳ ರಕ್ಷಣೆಯಲ್ಲಿ ದಾಳಿ ಮಾಡಿದ್ದಾರೆ. ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ತಿರುವು ನೀಡಬಲ್ಲ ಅನೇಕ ಸಾಕ್ಷಿಗಳು ಈ ವೇಳೆ ತಂಡಕ್ಕೆ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಕೊಳದಿಂದ ನೀರನ್ನು ಹೊರ ತೆಗೆಯಲು ಎರಡು ಪಂಪ್‌ಗಳನ್ನು ಅಳವಡಿಸಲಾಗಿದ್ದು, ತನಿಖೆ ಭರದಿಂದ ಸಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read