ಬಾಳೆಹಣ್ಣಿನ ಸಿಪ್ಪೆ ಹೀಗೆ ಬಳಸಿದ್ರೆ ದುಪ್ಪಟ್ಟಾಗುತ್ತೆ ಸೌಂದರ್ಯ

ಕಡಿಮೆ ಔಷಧದ ಬಳಕೆಯಿಂದ ಬೆಳೆಯುವ ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆರೋಗ್ಯಕ್ಕೆ ಒಳಿತನ್ನು ಮಾಡುವ ಬಾಳೆಹಣ್ಣಿನ ಸಿಪ್ಪೆ ಕೂಡ ಅನೇಕ ಉಪಯೋಗಗಳಿಗೆ ಬರುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಅದನ್ನು ಸದುಪಯೋಗಪಡಿಸಿಕೊಳ್ಳುವಂತ ಕೆಲವು ಉಪಾಯಗಳು ಇಲ್ಲಿವೆ.

ಬಾಳೆಹಣ್ಣಿನ ಸಿಪ್ಪೆಯಿಂದ ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜುವುದರಿಂದ ಹಲ್ಲು ಹೊಳಪನ್ನು ಪಡೆಯುತ್ತದೆ.

ದೇಹದ ಯಾವುದಾದರೂ ಭಾಗಕ್ಕೆ ಕೀಟಗಳು ಕಡಿದಾಗ ಚಿಕ್ಕ ಪುಟ್ಟ ಗಾಯಗಳಾಗುತ್ತವೆ. ಅಂತಹ ಗಾಯಗಳಿಗೆ ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿದರೆ ಉರಿ ಶಮನವಾಗುತ್ತದೆ ಮತ್ತು ಗಾಯದ ಕಲೆಗಳು ಇರುವುದಿಲ್ಲ.

ಮುಖದ ಮೇಲಿನ ಮೊಡವೆಗೂ ಬಾಳೆಹಣ್ಣಿನ ಸಿಪ್ಪೆ ಒಳ್ಳೆಯದು. ಇದರ ಸಿಪ್ಪೆಯಿಂದ ಮೊಡವೆಯನ್ನು ಮೃದುವಾಗಿ ಉಜ್ಜಿದರೆ ಮೊಡವೆಯಿಂದ ಮುಕ್ತಿ ಸಿಗುತ್ತದೆ.

ಮೊಟ್ಟೆಯ ಹಳದಿ ಭಾಗದೊಂದಿಗೆ ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿ ಮುಖಕ್ಕೆ ಲೇಪಿಸಿಕೊಂಡಲ್ಲಿ ಚರ್ಮದ ಸುಕ್ಕು ಮಾಯವಾಗಿ ಚರ್ಮ ಹೊಳೆಯುತ್ತದೆ.

ನಿಯಮಿತವಾಗಿ ಚರ್ಮಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚುವುದರಿಂದ ಚರ್ಮದ ಮೇಲಿನ ಮಚ್ಚೆಗಳನ್ನು ಹೋಗಲಾಡಿಸಬಹುದು.

ಬಾಳೆಹಣ್ಣಿನ ಸಿಪ್ಪೆಯಿಂದ ಶೂ ಪಾಲಿಶ್ ಮಾಡಿದರೆ ಶೂ ಹೊಳಪನ್ನು ಪಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read