ಬೆಳಗಾವಿ: ಹಳೇ ದ್ವೇಷದ ಕಾರಣಕ್ಕೆ ಎರಡು ಗ್ರಾಮಗಳ ಯುವಕರು ಮಚ್ಚು, ಲಾಂಗು ಹಿಡಿದು ಗಲಾಟೆ ನಡೆಸಿ, ಹೊಡೆದಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.
ಮಹಾ ನವಮಿ ದಿನ ಸಣ್ಣ ವಿಚಾರಕ್ಕೆ ಎರಡು ಗ್ರಾಮಗಳ ಯುವಕರ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಈಗ ಗುರ್ಲಾಪುರ ಗ್ರಾಮದ ಯುವಕರು, ಹಳ್ಳುರ ಗ್ರಾಮದ ಯುವಕರ ಗುಂಪಿನ ಮೇಲೆ ದಾಳಿ ನಡೆಸಲು ಮಚ್ಚು, ಲಾಂಗು ಹಿಡಿದು ಬಂದಿದೆ.
ಸಾರ್ವಜನಿಕವಾಗಿ ಕೈಯಲ್ಲಿ ಲಾಂಗ್ ಹಿಡಿದು ಯುವಕರ ಗ್ಯಾಂಗ್ ಓಡಾಡಿದೆ. ಇನ್ನೊಂದು ಯುವಕರ ಗುಂಪಿನ ಮೇಲೆ ಹಲ್ಲೆಗೆ ಮುಂದಾಗುತ್ತಿದಂತೆ ಇದನ್ನು ಕಂಡ ಸಾರ್ವಜನಿಕರು ತಪ್ಪಿಸಲು ಮುಂದಾಗಿದಾರೆ. ಗಲಾಟೆ ಬಿಡಿಸಲು ಬಂದ ಜನರ ಕೈಗೆ ಗಾಯಗಳಾಗಿವೆ.
ಲಾಂಗು ಹಿಡಿದು ಝಳಪಿಸುತ್ತಿರುವ ಯುವಕರನ್ನು ಹಿಡಿದು ಸರವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಮೂಡಲಿಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.