ಬೆಳಗಾವಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಮನೆಗಳ್ಳರು ಪೊಲೀಸರಿಗೂ ಕ್ಯಾರೇ ಎನ್ನದೇ ರಾಜಾರೋಷವಾಗಿ ಓಡಾಡುತ್ತಿದಂತಿದೆ. ಗಸ್ತು ತಿರುಗುತ್ತಿದ್ದ ಪೊಲೀಸರನ್ನೇ ತಳ್ಳಿ ಕಳ್ಳರ ಗ್ಯಾಂಗ್ ಪರಾರಿಯಾಗಿರುವ ಘಟನೆ ನಡೆದಿದೆ.
ನಿಪ್ಪಾಣಿ ನಗರದ ಮಾನೆ ಪ್ಲಾಟ್ ನಲ್ಲಿ ಮನೆಗಳ್ಳತನಕ್ಕೆ ಯತ್ನಿಸಿದ್ದ ಕಳ್ಳರ ಗುಂಪು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ ನಡೆಸಿ ಎಸ್ಕೇಪ್ ಆಗಿದೆ. ಬಂದೂಕು ಹಿಡಿದು ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಹೆದರಿಸಿ ಕಳ್ಳರ ಗ್ಯಾಂಗ್ ಪರಾರಿಯಾಗಿದೆ. ಮನೆಗಳ್ಳತನ ಮಾಡುತ್ತಿದ್ದ ವೇಳೆ ಮೂವರು ಕಳ್ಳರು ಗಸ್ತು ಪೊಲೀಸರನ್ನು ಕಂಡು ಅಡಗಿ ಕುಳಿತಿದ್ದರು. ಅನುಮಾನಗೊಂಡ ಇಬ್ಬರು ಪೊಲೀಸರು ವಾಪಾಸ್ ಬಂದು ಸ್ಥಳ ಪರಿಶೀಲಿಸುತ್ತಿದ್ದಂತೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಅವರನ್ನು ತಳ್ಳಿ ಎಸ್ಕೇಪ್ ಆಗಿದ್ದಾರೆ.
ಪೊಲೀಸರ ಕೈಯಲ್ಲಿ ಬಂದೂಕು ಇದ್ದರೂ ಏನೂ ಮಾಡಲಾಗಿಲ್ಲ. ಇದು ಪೊಲೀಸರ ಕಾರವೈಖರಿಯನ್ನು ಪ್ರಶ್ನಿಸುವಂತಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಈ ಘಟನೆಗಳು ಸೆರೆಯಾಗಿದ್ದು, ಕಳ್ಳರನ್ನು ಹಿಡಿಯದ ಪೊಲೀಸರ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
