ಬೆಳಗಾವಿ: ಬೆಳಗಾವಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಸಮಾವೇಶಕ್ಕೆ ನುಗ್ಗಿ ಗಲಾಟೆ ಮಾಡಿದ ಘಟನೆ ನಡೆದಿದ್ದು, ಪೊಲಿಅಸರ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿ ಕ್ಲಾಸ್ ತೆಗೆದುಕೊಂಡಿದಾರೆ.
ಬೆಳಗಾವ್ಯ ಸಿಪಿಎಡ್ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಪ್ರಾರಂಭಿಸುತ್ತಿದ್ದಂತೆಯೇ ಕೆಲ ಬಿಜೆಪಿ ಕಾರ್ಯಕರ್ತರು ಸಮಾವೇಶಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಬಿಜೆಪಿಯ ಕೆಲ ಮಹಿಳಾ ಕಾರ್ಯಕರ್ತರು ವೇದಿಕೆಯತ್ತ ಮುನ್ನುಗ್ಗಲು ಯತ್ನಿಸಿದ್ದಾರೆ. ಕಪ್ಪು ಪಟ್ತಿ ಪ್ರದರ್ಶನ ಮಾಡಿ ಸರ್ಕರದ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ಕೋಪಗೊಂಡ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣ ಅರ್ಧಕ್ಕೆ ನಿಲ್ಲಿಸಿ ಯಾರ್ರೀ ಅದು ಬೆಳಗಾವಿ ಎಸ್ ಪಿ? ಬನ್ರಿ ಇಲ್ಲಿ ಎಂದು ವೇದಿಕೆಗೆ ಕರೆದಿದ್ದಾರೆ. ಹೆಚ್ಚುವರಿ ಎಸ್ ಪಿ ವೇದಿಕೆಯತ್ತ ಓಡುತ್ತ ಬಂದಿದ್ದಾರೆ. ಸಮಾವೇಶದಲ್ಲಿ ಯಾರ್ರಿ ಅದು ಗಲಾಟೆ ಮಾಡುತ್ತಿರುವುದು? ಅಲ್ಲಿ ಗಲಾಟೆ ನಡೆಯುತ್ತಿರುವುದು ಗೊತ್ತಾಗುತ್ತಿಲ್ವಾ? ಪೊಲೀಸರು ಏನು ಮಾಡ್ತಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸಚಿವ ಎಂಬಿ.ಪಾಟೀಲ್ ಸಿಎಂ ಸಿದ್ದರಾಮಯ್ಯ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೂ ತಣ್ಣಗಾಗದ ಸಿಎಂ ಸಿದ್ದರಾಮಯ್ಯ, ಹೆಚ್ಚುವರಿ ಎಸ್ ಪಿಯನ್ನು ಏನು ಮಾಡ್ತಿದ್ದೀರಾ? ಎಂದು ಏರು ಧ್ವನಿಯಲ್ಲಿ ಕೈ ಎತ್ತಿದರು. ಕ್ಷಣ ಕಾಲ ಪೊಲೀಸ್ ಅಧಿಕಾರಿ ವಿಚಲಿತರಾದರು. ತಕ್ಷಣ ಗಲಾಟೆ ನಿಲ್ಲಿಸಿ, ಅವರನ್ನು ವಶಕ್ಕೆ ಪಡೆಯಿರಿ ಎಂದು ಸೂಚಿಸಿದರು.