BIG NEWS: ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ

ಬೆಳಗಾವಿ: ದುಷ್ಕರ್ಮಿಗಳಿಗೆ ದೇವರ ಮೇಲೂ ಕಿಂಚಿತ್ತೂ ಭಯ-ಭಕ್ತಿ ಎಂಬುದಿಲ್ಲ. ಬೆಳಗಾವಿ ಪುರಾಣ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಕಪಿಲೇಶ್ವರ ದೇವಸ್ಥಾನಕ್ಕೆ ಒಂದು ದಿನ ಬಾಂಬ್ ಹಾಕುವುದಾಗಿ ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಗಸ್ಟ್ 12ರಂದು Marvelous belgaum ಎಂಬ ಹೆಸರಿನ ಇನ್ ಸ್ಟಾ ಗ್ರಾಂ ಖಾತೆದಾರ ರಾಕೇಶ್ ನಂದಗಡ ಎಂಬುವವರು ಕಪಿಲೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವದ ಸ್ಟೋರಿ ಹಂಚಿಕೊಂಡಿದ್ದರು. ಈ ಸ್ಟೋರಿ ನೋಡಿದ ಇಲಾಯತ್ ಎಂಬ ಹೆಸರಿನ ಇನ್ ಸ್ಟಾಗ್ರಾಂ ಖಾತೆದಾರ ರಿಪ್ಲೈ ಮಾಡಿದ್ದು, ‘ಮಾಷಾ ಅಲ್ಲಾ ಇದರ್ ಬಾಂಬ್ ಪೋಡುಂಗಾ ಏಕ್ ದಿನ್’ ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನು ಗಮನಿಸಿದ ರಾಕೇಶ್ ನಂದಗಡ, ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read