ನಕಲಿ ಛಾಪಾ ಕಾಗದ ಬಳಸಿ ಭೂ ಕಬಳಿಕೆ; ತಾಲೂಕು ಪಂಚಾಯಿತಿ ಇಒ, ಪಿಡಿಒ ವಿರುದ್ಧ ಗಂಭೀರ ಆರೋಪ; ಕಾಂಗ್ರೆಸ್ ಮುಖಂಡನಿಂದ ದೂರು ದಾಖಲು

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ ಬಂದಿದೆ. ನಕಲಿ ಬಾಂಡ್ ತಯಾರಿಸಿ ದಾಖಲೆಗಳನ್ನು ಸೃಷ್ಟಿ ಮಾಡಿ ಭೂಮಿ ಕಬಳಿಸುತ್ತಿರುವ ಗ್ಯಾಂಗ್ ಒಂದು ಜಿಲ್ಲೆಯಲ್ಲಿ ಆಕ್ಟೀವ್ ಆಗಿದೆ ಎಂಬ ಆರೋಪ ಕೇಳಿಬಂದಿದೆ.

ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮರೇಶ ಹೊಸಮನಿ ಎಂಬುವವರಿಗೆ ಸೇರಿದ ಒಟ್ಟು 12 ಗುಂಟೆ ಜಾಗದ ಪೈಕಿ 6 ಗುಂಟೆ ಜಾಗವನ್ನು ದುಷ್ಕರ್ಮಿಗಳು ಅಮರೇಶ ಹೊಸಮನಿ ಅವರ ನಕಲಿ ಸಹಿ ಹಾಗೂ ಫೇಸ್ ಬುಕ್ ನಿಂದ ಫೊಟೋ ತೆಗೆದು ನಕಲಿ ದಾಖಲೆ ಪತ್ರ ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿಕೊಂಡು ಬಳಿಕ ಮೂರು ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಇದರಲ್ಲಿ ಅಧಿಕಾರಿಗಳ ಕೈವಾಡ ಶಂಕೆಯೂ ವ್ಯಕ್ತವಾಗಿದೆ. ಭೂ ಮಾಫಿಯಾ ದಂಧೆ ಕೋರರು ಅಧಿಕಾರಿಗಳಿಂದಲೇ ಅಸ್ತಿ ಪರಭಾರೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಸವದತ್ತಿ ತಾಲೂಕು ಪಂಚಾಯಿತಿ ಇಒ ಯಶವಂತ ಹೊಸಮನಿ ಹಾಗೂ ಮಾಡಮಗೇರಿ ಗ್ರಾಮ ಪಂಚಾಯಿತಿ ಪಿಡಿಒ ಶೇರಿ ವಿರುದ್ಧ ಕಾಂಗ್ರೆಸ್ ಮುಖಂಡ ಲಖನ್ ಸವಸುದ್ದಿ ಆರೋಪ ಮಾಡಿದ್ದಾರೆ.

ಪ್ರಕರಣದ ಬಗ್ಗೆ ಒಂದೆಡೆ ಮುರಗೋಡ ಠಾಣೆಯಲ್ಲಿ ದೂರು ದಾಖಲಾಗಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಮುಖಂಡ ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read