BIG NEWS: ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದ ಪತಿ 3 ವರ್ಷಗಳ ಬಳಿಕ ಪ್ರತ್ಯಕ್ಷ: ಪ್ಲಾನ್ ಮಾಡಿ ಕೊಲೆಗೈದು ನಾಟಕವಾಡಿದ ಪತ್ನಿ-ಅತ್ತೆ

ಬೆಳಗಾವಿ: ಕೋವಿಡ್ ಸಂದರ್ಭದಲ್ಲಿ ಉದ್ಯಮದಲ್ಲಿ ನಷ್ಟಹೊಂದಿ ವಿಪರೀತ ಸಾಲ ಮಾಡಿಕೊಂಡಿದ್ದ ವಕ್ತಿ ಮನೆಯನ್ನೂ ಅಡಮಾನವಿಟ್ಟು ಇದ್ದಕ್ಕಿದ್ದಂತೆ ನಾಪತ್ತೆಯಾದವನು ಮೂರು ವರ್ಷಗಳ ಬಳಿಕ ಪ್ರತ್ಯಕ್ಷನಾಗಿದ್ದ. ವಾಪಾಸ್ ಬಂದವನು ಸುಮ್ಮನಿರದೇ ಕುಡಿದು ಹೆಂಡತಿ ಜೊತೆ ಪದೇ ಪದೇ ಜಗಳವಾಡಿ ಕಿರುಕುಳ ನೀಡುತ್ತಿದ್ದ ಬೇಸತ್ತ ಪತ್ನಿ ಹಾಗೂ ಆಕೆಯ ತಾಯಿ ವ್ಯಕ್ತಿಯನ್ನೇ ಕೊಂದು ಕಥೆ ಕಟ್ಟಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ವಿನಾಯಕ ಜಾಧವ್ (48) ಪತ್ನಿ ಹಾಗೂ ಅತ್ತೆಯಿಂದ ಕೊಲೆಯಾದ ವ್ಯಕ್ತಿ. ಬೆಳಗಾವಿಯ ಪಿರನವಾಡಿ ನಿವಾಸಿ ವಿನಾಯಕ ಜಾದವ್ ನನ್ನು ಪತ್ನಿ ಹಾಗೂ ಅತ್ತೆಯೇ ಕೊಲೆಗೈದು ಆತ ಕುಡಿದುಬಂದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಾಟಕವಾಡಿದ್ದರು. ಆದರೆ ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿದೆ. ಪತ್ನಿ ರೇಣುಕಾ ಹಾಗೂ ಅತ್ತೆ ಶೋಭಾ ಅರೆಸ್ಟ್ ಆಗಿದ್ದಾರೆ.

ಕೋವಿಡ್ ವೇಳೆ ಉದ್ಯಮದಲ್ಲಿ ಲಾಸ್ ಆಗಿ ವಿಪರೀತ ಸಾಲ ಮಾಡಿಕೊಂಡಿದ್ದ ವಿನಾಯಕ ಜಾದವ್, ಮನೆಯನ್ನೂ ಅಡಮಾನವಿಟ್ಟಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತು ಒಂದು ದಿನ ಮನೆಬಿಟ್ಟು ಹೋಗಿದ್ದರು. ಮನೆ ಬಳಿ ಬಂದು ಸಾಲಗಾರರು ಗಲಾಟೆ ಮಾಡುತ್ತಿದ್ದರು. ಪತ್ನಿ ಹಾಗೂ ಅತ್ತೆ ಆತ ಮಾಡಿದ ಸಾಲಕ್ಕೂ ನಮಗೂ ಸಂಬಂಧವಿಲ್ಲ ಎಂದು ಜಗಳವಾಡಿ ಸಾಲಗಾರರನ್ನು ಕಳುಹಿಸುತ್ತಿದ್ದರು. ಇದೇ ರೀತಿ ಮೂರು ವರ್ಷ ಕಳೆದಿದೆ. ಇದೀಗ ಏಕಾಏಕಿ ವಿನಾಯಕ ಜಾದವ್ ಮನೆಗೆ ಬಂದಿದ್ದಾನೆ.

ಹೀಗೆ ಬಂದವನು ಹೆಂಡತಿ- ಅತ್ತೆ ಜೊತೆ ಚನ್ನಾಗಿ ಇರುವುದು ಬಿಟ್ಟು ಕುಡಿದು ಬಂದು ಗಲಾಟೆ ಮಾಡುವುದು, ಕಿರುಕುಳ ನೀಡುವುದು ಮಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಹಾಗೂ ಅತ್ತೆ ಜಾದವನನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ.

ಮಲಗಿದ್ದ ಜಾದವನ ಕತ್ತನ್ನು ಹಗ್ಗದಿಂದ ಕಟ್ಟಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಬಳಿಕ ಕುಡಿದು ಬಿದ್ದು ಸಾವನ್ನಪ್ಪಿದ್ದಾನೆ. ಸಹಜ ಸಾವು ಎಂದು ಕಥೆ ಕಟ್ಟಿದ್ದಾರೆ. ಆದರೆ ತಿಂಗಳ ಬಳಿಕ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆ ರಹಸ್ಯ ಬಯಲಾಗಿದೆ. ಬೆಳಗಾವಿ ಗ್ರಾಮೀಣ ಠಾಣೆ ಪೊಲಿಸರು ಜಾದವನ ಪತ್ನಿ ಹಾಗೂ ಅತ್ತೆಯನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read