ಬೆಳಗಾವಿ: ಸರ್ಕಾರಿ ಆಸ್ಪತ್ರೆಯ ವೈದ್ಯನೊಬ್ಬ ಕಂಠಪೂರ್ತಿ ಕುಡಿದು ಎಣ್ಣೆ ಮತ್ತಲ್ಲೇ ರೋಗಿಗೆ ತಪಾಸಣೆ ಮಾಅಡಿರುವ ಆರೋಪ ಕೇಳಿಬಂದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಹಿತ್ತಲಮನಿ ಎಣ್ಣೆ ಹೊಡೆದು ಫುಲ್ ಟೈಟಾಗಿ ಬಂದು ಹೃದ್ರೋಗಿಯ ತಪಾಸಣೆ ನಡೆಸಿದ್ದಾರೆ. ರೋಗಿಯ ಸಂಬಂಧಿಕರು ಈ ಸ್ಥಿತಿಯಲ್ಲಿ ರೋಗಿಯನ್ನು ತಪಾಸಣೆ ನಡೆಸದಂತೆ ಹೇಳಿದ್ದಾರೆ. ಆದರೂ ಕೇಳದ ವೈದ್ಯ ತುರಾಡುತ್ತಲೇ ಬಂದು ನಿಂತುಕೊಳ್ಳಲು ಆಗದಿದ್ದರೂ ಓಲಾಡುತ್ತಲೇ ರೋಗಿಯ ಪರೀಕ್ಷೆ ಮಾಡಿದ್ದಾರೆ.
ಈ ವೇಳೆ ರೋಗಿಯ ಕುಟುಂಬದವರು ವೈದ್ಯನನ್ನು ಹಿಗ್ಗಾ ಮುಗ್ಗಾ ಬೈದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ನರ್ಸ್ ತಾನೇ ಪರೀಕ್ಷಿಸುವಾಗಿ ಹೇಳಿ ರೋಗಿಯ ಪರೀಕ್ಷೆ ಮಾಡಿದ್ದಾರೆ. ವೈದ್ಯ ಸುರೇಶ್ ಹಿತ್ತಲಮನಿ ಯಾವಾಗಲು ಮದ್ಯದ ಅಮಲಿನಲ್ಲಿ ಆಸ್ಪತ್ರೆಗೆ ಬಂದು ರೋಗಿಗಳನ್ನು ಪರೀಕ್ಷಿಸುತ್ತಾರೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ರೋಗಿಗಳು ಕಿಡಿಕಾರಿದ್ದಾರೆ.