ಮನೆಗೆ ಮಹಿಳೆ ಆಹ್ವಾನಿಸಿ ಬೆಳಿಗ್ಗೆಯಿಂದ ರಾತ್ರಿವರೆಗೆ ಕೂಡಿ ಹಾಕಿ ಗ್ಯಾಂಗ್ ರೇಪ್: ಪುರುಷನ ಜತೆ ನಿಲ್ಲಿಸಿ ಖಾಸಗಿ ಫೋಟೋ ತೆಗೆದ ಐವರು ಅರೆಸ್ಟ್

ಬೆಳಗಾವಿ: ಗೋಕಾಕ್ ನಗರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ್ ಗುಳೇದ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಸ್.ಪಿ. ಮಾರ್ಗದರ್ಶನದಲ್ಲಿ ಗೋಕಾಕ್ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗೋಕಾಕ್ ತಾಲೂಕಿನ ಬೆನಚಿನಮರಡಿಯ ರಮೇಶ ಖಿಲಾರಿ, ದುರ್ಗಪ್ಪ ವಡ್ಡರ, ಯಲ್ಲಪ್ಪ, ಕೃಷ್ಣಪ್ರಕಾಶ, ರಾಮಸಿದ್ದ ಬಂಧಿತ ಆರೋಪಿಗಳು. ಬಸವರಾಜ ಖಿಲಾರಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಮಹಿಳೆ ಸೆ. 5ರಂದು ಪರಿಚಿತ ವ್ಯಕ್ತಿಯೊಂದಿಗೆ ಗೋಕಾಕ್ ಮಾರುಕಟ್ಟೆಗೆ ಬಂದಿದ್ದು, ಇವರಿಬ್ಬರಿಗೂ ಪರಿಚಿತನಾಗಿದ್ದ ಆರೋಪಿ ಬಸವರಾಜ ಖಿಲಾರಿ ಮನೆಗೆ ಚಹಾ ಕುಡಿಯಲು ಆಹ್ವಾನಿಸಿದ್ದಾನೆ. ಮನೆಗೆ ಕರೆದುಕೊಂಡು ಹೋಗಿ ಇಬ್ಬರನ್ನು ಕೂಡಿ ಹಾಕಿದ್ದು, ಅಲ್ಲಿಗೆ ಬಂದ ಐವರು ಆರೋಪಿಗಳು ಬೆಳಿಗ್ಗೆಯಿಂದ ರಾತ್ರಿವರೆಗೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ, ಅವರ ಬಳಿ ಇದ್ದ ಎರಡು ಸಾವಿರ ರೂ. ನಗದು, ಚಿನ್ನಾಭರಣ ಕಸಿದುಕೊಂಡಿದ್ದಾರೆ. ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಕೊನೆಗೆ ಮಹಿಳೆ ಮತ್ತು ಆಕೆಯೊಂದಿಗೆ ಬಂದಿದ್ದ ಪುರುಷನನ್ನು ಜೊತೆಯಾಗಿ ನಿಲ್ಲಿಸಿ ಖಾಸಗಿ ಫೋಟೋ ತೆಗೆದಿದ್ದು, ಯಾರಿಗಾದರೂ ಅತ್ಯಾಚಾರ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read