BIG NEWS: ಬೆಳಗಾವಿಯ ಅರಣ್ಯ ಪ್ರದೇಶದಲ್ಲಿ ಗುಂಡಿನ ದಾಳಿ: ಓರ್ವ ಯುವಕ ಸಾವು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲುಕಿನ ಅರಣ್ಯ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಓರ್ವ ಯುವಕ ಬಲಿಯಾಗಿರುವ ಘಟನೆ ನಡೆದಿದೆ.

ಖಾನಾಪುರದ ಹಲಸಿ ಬೇಕವಾಡ ರಸ್ತೆಯ ನರಸೇವಾಡಿಬೀಜ್ ಎಂಬಲ್ಲಿ ತಡರಾತ್ರಿ ಗುಂಡಿನ ದಾಳಿ ನಡೆದಿದ್ದು, ಯುವಕನ ಮೇಲೆ ಗುಂಡೇಟು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತ ಯುವಕನನ್ನು ಅಲ್ತಾಫಾಗಸ್‌ ಮಕಾಂದರ್ (27) ಎಂದು ಗುರುತಿಸಲಾಗಿದೆ. ನರಸೇವಾಡಿಬೀಜ್ ಬಳಿ ಮರಳು ಸಂಗ್ರಹ ಕೂಡ ನಡೆಯುತ್ತಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಯುವಕನ ಮೇಲೆ ಗುಂಡಿನ ದಾಳಿ ನಡೆದಿದೆಯೇ ಅಥವಾ ಬೇಟೆಗಾರನ ಗುಂಡೇಟಿಗೆ ಯುವಕ ಬಲಿಯಾಗಿದ್ದಾನಾ? ಎಂಬ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ‌ಉತ್ತರ ವಲಯ ಐಜಿಪಿ ವಿಕಾಸ ಕುಮಾರ್, ಹೆಚ್ಚುವರಿ ಎಸ್ ಪಿ  ಶೃತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read