ಬೆಳಗಾವಿ: ಬೀದಿನಾಯಿ ದಾಳಿಗೆ ಬೆಳಗಾವಿಯಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಶಂಕರ್ ಬಸವಣ್ಣೆಪ್ಪ ಪರಸಪ್ಪಗೋಳ ಮೃತ ದುರ್ದೈವಿ. ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಆರು ತಿಂಗಳ ಹಿಂದೆ ಶಿವಶಂಕರ್ ಗೆ ಬೀದಿನಾಯಿ ಕಚ್ಚಿತ್ತು. ಇದರಿಂದ ನಂಜುಹೆಚ್ಚಾಗಿ ಊಟ ನೀರು ಬಿಟ್ಟು ತೀವ್ರ ಅನಾರೋಗ್ಯಕ್ಕೀಡಾಗಿದ್ದರು.
ಶಿವಶಂಕರ್ ಅವರನ್ನು ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.