ಕಣ್ಣಿನ ಅಂದ ಹೆಚ್ಚಿಸುವ ಕಾಜಲ್ ಬಳಸುವ ಮುನ್ನ ಇದನ್ನೋದಿ

 

ಮೇಕಪ್ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧವಿದೆ. ಮೇಕಪ್ ಇಲ್ಲದೆ ಮನೆಯಿಂದ ಕಾಲಿಡದ ಮಹಿಳೆಯರಿದ್ದಾರೆ. ಹೆಚ್ಚು ಮೇಕಪ್ ಬಯಸದ ಮಹಿಳೆಯರು ಕೂಡ ಕಾಜಲ್ ಹಚ್ಚಿಕೊಳ್ತಾರೆ. ಇದು ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಸೌಂದರ್ಯ ವೃದ್ಧಿಸುವ ಈ ಕಾಜಲ್ ಆರೋಗ್ಯಕ್ಕೆ ಅಪಾಯಕಾರಿ ಎಂಬುದು ನಿಮಗೆ ಗೊತ್ತಾ…?

ಇತ್ತೀಚಿನ ದಿನಗಳಲ್ಲಿ ಎಲ್ಲವೂ ನಕಲಿಯಾಗ್ತಿದೆ. ಅದ್ರಲ್ಲಿ ಕಾಜಲ್ ಕೂಡ ಸೇರಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆ ಬ್ರಾಂಡ್ ನ ಕಾಜಲ್ ನೀವು ನೋಡ್ಬಹುದು. ಆದರೆ ಎಲ್ಲವೂ ಆರೋಗ್ಯಕ್ಕೆ ಯೋಗ್ಯವಲ್ಲ. ಅದರಲ್ಲಿ ರಾಸಾಯನಿಕಗಳ ಪ್ರಮಾಣ ಅಧಿಕವಾಗಿರುತ್ತದೆ. ಅದನ್ನು ಕಣ್ಣಿಗೆ ಹಚ್ಚಿದಾಗ  ಅಲರ್ಜಿ ಮತ್ತು ಶುಷ್ಕ ಕಣ್ಣುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಪಾದರಸ, ಸೀಸ ಮತ್ತು ಪ್ಯಾರಾಬೆನ್‌ಗಳಂತಹ ಅಂಶಗಳನ್ನು ಕಾಜಲ್‌ನಲ್ಲಿ ಬಳಸಲಾಗುತ್ತದೆ. ಇದು ಕಣ್ಣುಗಳಲ್ಲಿ ಕಾಂಜಂಕ್ಟಿವಿಟಿಸ್‌ನ ಸಮಸ್ಯೆಗಳನ್ನು ಉಂಟುಮಾಡಬಹುದು. ಪ್ರತಿನಿತ್ಯ ಕಾಜಲ್ ಬಳಕೆಯಿಂದ ಕಾರ್ನಿಯಲ್ ಅಲ್ಸರ್ ಮತ್ತು ಡ್ರೈ ಕಣ್ಣುಗಳು ಸಮಸ್ಯೆ ಹೆಚ್ಚಾಗುತ್ತದೆ. ಕಣ್ಣುಗಳ ಒಳಗೆ ಊದಿಕೊಳ್ಳುವ ಅಪಾಯವೂ ಇದೆ.

ಉತ್ತಮ ಕಾಜಲ್ ಬಳಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಮನೆಯಲ್ಲಿಯೇ ನೈಸರ್ಗಿಕವಾಗಿ ಕಾಜಲ್ ತಯಾರಿಸಿ ನೀವು ಬಳಸಬಹುದು. ಒಂದು ದೀಪವನ್ನು ಹಚ್ಚಿ. ಬಟ್ಟಲಿಗೆ ತುಪ್ಪ ಸವರಿ ಅದನ್ನು ದೀಪದ ಮೇಲೆ ಇಡಿ. 20-30 ನಿಮಿಷಗಳ ಕಾಲ ದೀಪಕ್ಕೆ ಬಟ್ಟಲು ಹಿಡಿದ್ರೆ ಮಸಿ ಬಡಿಯುತ್ತದೆ. ಅದನ್ನು ನೀವು ಕಾಜಲ್ ರೂಪದಲ್ಲಿ ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read