ಬೆಡ್ ಶೀಟ್ ನಿಂದಲೂ ಕಾಡುತ್ತೆ ಅನೇಕ ರೋಗ…..!

ಇಡೀ ದಿನ ಸಮಯದ ಹಿಂದೆ ಓಡುವ ಜನರಿಗೆ ನೆಮ್ಮದಿ ನೀಡುವ ಜಾಗ ಹಾಸಿಗೆ. ಎಲ್ಲ ಕೆಲಸ ಮುಗಿಸಿ ಹಾಸಿಗೆಗೆ ಬರ್ತಿದ್ದಂತೆ ಹಿತವೆನ್ನಿಸುತ್ತದೆ. ಆದ್ರೆ ನೀವು ಇಷ್ಟಪಟ್ಟು ಮಲಗುವ ಈ ಹಾಸಿಗೆಯೇ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಅಂದ್ರೆ ನೀವು ನಂಬ್ಲೇಬೇಕು. ನಿಮ್ಮನ್ನು ಅನಾರೋಗ್ಯಕ್ಕೆ ದೂಡುವಲ್ಲಿ ಬೆಡ್‌ ಶೀಟ್‌ ಪಾತ್ರವೂ ಇದೆ.

ಬೆಡ್‌ ಗೆ ಹಾಕಿದ ಬೆಡ್‌ ಶೀಟ್‌ ಎಷ್ಟು ದಿನಕ್ಕೊಮ್ಮೆ ಬದಲಿಸುತ್ತೇವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಕೆಲವರು ಅದು ಹಳೆಯದಾಗುವವರೆಗೂ ಇಟ್ಟಿರುತ್ತಾರೆ. ಮತ್ತೆ ಕೆಲವರು ಆಗಾಗ ಬೆಡ್‌ ಶೀಟ್‌ ಬದಲಿಸುತ್ತಾರೆ. ಈ ಬಗ್ಗೆ ನಡೆದ ಅಧ್ಯಯನದ ಪ್ರಕಾರ, ಶೇಕಡಾ 10.2ರಷ್ಟು ಜನರು ಪ್ರತಿ 2 ತಿಂಗಳ ನಂತರ ಬೆಡ್‌ಶೀಟ್‌ ಬದಲಾಯಿಸುತ್ತಾರೆ. ಶೇಕಡಾ 44.9 ಕ್ಕಿಂತ ಕಡಿಮೆ ಜನರು ಪ್ರತಿ ಒಂದರಿಂದ ಎರಡು ವಾರಗಳಿಗೊಮ್ಮೆ ಬೆಡ್ ಶೀಟ್‌ಗಳನ್ನು ಬದಲಾಯಿಸುತ್ತಾರೆ. ಜನರು ಆರೋಗ್ಯವಾಗಿರಬೇಕೆಂದ್ರೆ ಪ್ರತಿ ವಾರ ಬೆಡ್‌ ಶೀಟ್‌ ಬದಲಿಸಬೇಕು ಎಂದು ತಜ್ಞರು ಹೇಳ್ತಾರೆ. ನಿಮ್ಮ ಕೊಳಕು ಬೆಡ್‌ ಶೀಟ್‌ ನಿಂದ ನಾನಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಬೆಡ್‌ ಶೀಟ್‌ ಯಾವಾಗ ಬದಲಿಸಬೇಕು? :

ಅಲರ್ಜಿ : ಬೆಡ್‌ ಶೀಟ್‌ ನಲ್ಲಿರುವ ಧೂಳು ಹಾಗೂ ಕೊಳಕು ನಿಮಗೆ ಅಲರ್ಜಿಯುಂಟು ಮಾಡುತ್ತದೆ. ಈಗಾಗಲೇ ನೀವು ತ್ವಚೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಹೊಂದಿದ್ದರೆ ಅದು ಹೆಚ್ಚಾಗುತ್ತದೆ. ಅಲರ್ಜಿ ಸಮಸ್ಯೆ ಹೊಂದಿರುವವರು ಪ್ರತಿ ದಿನ ಬೆಡ್‌ ಶೀಟ್‌ ಬದಲಿಸಬೇಕು.

ಬೆವರು : ಕೆಲವರು ರಾತ್ರಿ ವಿಪರೀತ ಬೆವರುತ್ತಾರೆ. ಈ ಬೆವರು ಬೆಡ್‌ ಶೀಟ್‌ ಗೆ ಅಂಟಿಕೊಂಡು ಖಾಯಿಲೆಯುಂಟು ಮಾಡುತ್ತದೆ. ಹಾಗಾಗಿ ಅಂತವರು ಕೂಡ ದಿನಕ್ಕೊಮ್ಮೆ ಬೆಡ್‌ ಶೀಟ್‌ ಬದಲಿಸಬೇಕು.

ಸಾಕುಪ್ರಾಣಿ : ನಿಮ್ಮ ಮನೆಯಲ್ಲಿ ಸಾಕುಪ್ರಾಣಿ ಇದ್ದರೆ ನೀವು ಪ್ರತಿ ದಿನ ಬೆಡ್‌ ಶೀಟ್‌ ಬದಲಿಸಬೇಕು. ನಿಮ್ಮ ಜೊತೆ ನಿಮ್ಮ ಬಳಿಯೇ ಪ್ರಾಣಿ ಮಲಗುತ್ತಿದ್ದರೆ ಬೆಡ್‌ ಶೀಟನ್ನು ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read