ಪುರುಷರನ್ನೂ ಕಾಡುವ ಸೌಂದರ್ಯ ಸಮಸ್ಯೆಗಳಿವು…..!

ಮಹಿಳೆಯರಂತೆ ಪುರುಷರೂ ಹಲವು ಹೇಳಲಾರದ ಸಮಸ್ಯೆಗಳಿಂದ ಬಳಲುತ್ತಾರೆ. ಅವುಗಳಲ್ಲಿ ಮುಖ್ಯವಾದುದು ತಲೆ ಬೋಳಾಗುವುದು. ಕಪ್ಪು ಕೂದಲು ಬಣ್ಣ ಬದಲಾಯಿಸಿಕೊಂಡು ಬೆಳ್ಳಗಾಗುವ ಹೊತ್ತಿಗೇ ಕೂದಲು ವಿಪರೀತ ಉದುರಿ ಪುರುಷರ ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಒಮ್ಮೆ ಬೋಳಾದ ನೆತ್ತಿಯಲ್ಲಿ ಮತ್ತೆ ಕೂದಲು ಹುಟ್ಟಲು ಸಾಧ್ಯವೇ ಇಲ್ಲ. ಕಸಿ ಕಟ್ಟುವ ಮೂಲಕ ಅಥವಾ ವಿಗ್ ಬಳಸುವ ಮೂಲಕ ಮಾತ್ರ ನೀವು ಇದನ್ನು ಮರೆಮಾಚಬಹುದು. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಿಗೆ ಮರುಳಾಗಿ ದುಂದುವೆಚ್ಚ ಮಾಡದಿರಿ.

ವಯಸ್ಸಾಗುತ್ತಿರುವುದನ್ನು ಒಪ್ಪಿಕೊಳ್ಳಿ. ತಲೆಯ ಹಣೆಯ ಎರಡೂ ಬದಿಗಳಿಂದ ಆರಂಭವಾಗುವ ಈ ಪ್ರಕ್ರಿಯೆ ನಿಧಾನವಾಗಿ ಒಳಸರಿದು ತಲೆಯ ನಡುಭಾಗದ ವರೆಗೆ ಮುಂದುವರಿಯುತ್ತದೆ. ಇದು ಇಪ್ಪತ್ತರಿಂದ ಐವತ್ತು ವಯಸ್ಸಿನ ಒಳಗೆ ಯಾವಾಗಲಾದರೂ ಕಾಣಿಸಿಕೊಳ್ಳಬಹುದು. ಐವತ್ತರ ಬಳಿಕ ಶೇ.80ರಷ್ಟು ಮಂದಿ ಬಕ್ಕ ತಲೆ ಹೊಂದಿರುತ್ತಾರೆ ಎಂಬುದನ್ನು ಸಂಶೋಧನೆ ದೃಢಪಡಿಸಿದೆ.

ಹಾಗಾಗಿ ಇದಕ್ಕೆ ಚಿಕಿತ್ಸೆಗಳಿಲ್ಲ ಹಾಗೂ ಉದುರುತ್ತಿರುವುದನ್ನು ನಿಲ್ಲಿಸಲೂ ಸಾಧ್ಯವಿಲ್ಲ. ಕೆಲವೊಮ್ಮೆ ಇದು ಅನುವಂಶಿಕವೂ ಆಗಿರಬಹುದು. ಇದಕ್ಕೆ ಸ್ಪಷ್ಟ ಚಿಕಿತ್ಸೆಇನ್ನು ಕಂಡು ಹಿಡಿಯಲಾಗಿಲ್ಲ.

ಪುರುಷರಲ್ಲಿ ವಯಸ್ಸಾದ ಬಳಿಕವೂ ಮೊಡವೆಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ಚಿವುಟದೆ ಹಾಗೆ ಬಿಡಿ. ಇದಕ್ಕೆ ಹೆಚ್ಚಿನ ಸ್ವಚ್ಛತೆ ಹಾಗೂ ತ್ವಚೆಯ ಸೂಕ್ತ ಆರೈಕೆಯೇ ಚಿಕಿತ್ಸೆ. ಉತ್ತಮ ಆಹಾರ ಸೇವೆನೆಯೂ ಇದರ ನಿಯಂತ್ರಣಕ್ಕೆ ಬಹುಮುಖ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read