ಒಂದು ಪೀಸ್ ಕಬಾಬ್ ಕಡಿಮೆ ಕೊಟ್ಟ ಹೋಟೆಲ್ ಮಾಲೀಕನಿಗೆ ಥಳಿತ

ಬೆಂಗಳೂರು: ಒಂದು ಪೀಸ್ ಕಬಾಬ್ ಕಡಿಮೆ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕನಿಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಣನನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈಶ್ವರ ಲೇಔಟ್ ನಲ್ಲಿ ಬುಧವಾರ ತಡರಾತ್ರಿ 12:30 ಸುಮಾರಿಗೆ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಹೋಟೆಲ್ ಮಾಲೀಕ ಬಾಬು ದೂರು ನೀಡಿದ್ದಾರೆ. ಆರೋಪಿಗಳಾದ ಅಭಿ ಮತ್ತು ಮನು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಹಲವು ವರ್ಷಗಳಿಂದ ಬಾಬು ಮಾಂಸಹಾರಿ ಹೋಟೆಲ್ ನಡೆಸುತ್ತಿದ್ದು, ಬುಧವಾರ ರಾತ್ರಿ ಹೋಟೆಲ್ ಗೆ ಬಂದಿದ್ದ ಯುವಕರು 120 ರೂಪಾಯಿ ಕೊಟ್ಟು ಒಂದು ಪ್ಲೇಟ್ ಕಬಾಬ್ ಪಾರ್ಸೆಲ್ ಪಡೆದುಕೊಂಡಿದ್ದಾರೆ. ಮನೆಗೆ ಹೋಗಿ ನೋಡಿದಾಗ 10 ಪೀಸ್ ಬದಲಿಗೆ 9 ಪೀಸ್ ಇರುವುದು ಗೊತ್ತಾಗಿದೆ.

ಕೂಡಲೇ ಹೋಟೆಲ್ ಗೆ ವಾಪಸ್ ಬಂದು ಈ ಬಗ್ಗೆ ಪ್ರಶ್ನಿಸಿದ್ದಾರೆ. ಹೋಟೆಲ್ ಮಾಲೀಕ ಮತ್ತು ಯುವಕರ ನಡುವೆ ಜಗಳವಾಗಿದ್ದು, ಬಾಬು ಮುಖಕ್ಕೆ ಗುದ್ದಿ ಹಲ್ಲೆ ನಡೆಸಿ ಯುವಕರು ಪರಾರಿಯಾಗಿದ್ದಾರೆ. ಕೋಣನಕುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read