ಕಾಲು ಒರೆಸೋ ಮ್ಯಾಟ್ ಆಯ್ಕೆ ಮಾಡುವಾಗ ಇರಲಿ ಜಾಣತನ

ಕಾಲು ಒರೆಸುವ ಸಾಧಾರಣ ವಿಷಯಕ್ಕೆ ಮ್ಯಾಟ್ ಆಯ್ಕೆ ಹೇಗೆ ಮಹತ್ವ ಪಡೆದುಕೊಳ್ಳುತ್ತದೆ ಗೊತ್ತಾ?

ಕಾಲನ್ನು ಒರೆಸುವ ಮ್ಯಾಟ್ ಕೊಂಡುಕೊಳ್ಳುವಾಗ ಅದನ್ನು ಎಲ್ಲಿ ಬಳಸುವ ಉದ್ದೇಶವಿದೆ ಎಂಬುದನ್ನು ತಿಳಿಯುವುದು ಅತಿ ಮುಖ್ಯ. ಇಲ್ಲದೆ ಹೋದರೆ ಅದರ ಉದ್ದೇಶವೇ ನಷ್ಟವಾದೀತು.

* ಮನೆಯ ಮುಖ್ಯ ದ್ವಾರದ ಮ್ಯಾಟ್ ಆದರೆ ರಬ್ಬರ್ ಮ್ಯಾಟ್ ಖರೀದಿಸುವುದು ಒಳ್ಳೆಯದು. ಏಕೆಂದರೆ ಮನೆಯ ಮುಖ್ಯ ದ್ವಾರದಿಂದ ಪ್ರವೇಶ ಮಾಡುವಾಗ ಕಾಲಿನ ಧೂಳನ್ನು ಹಿಡಿದಿಡುವುದು ಅತಿ ಮುಖ್ಯ. ಇಲ್ಲಿ ನೀರು ಹೀರುವ ಮ್ಯಾಟ್ ಬಳಸಿ ಪ್ರಯೋಜನವಿಲ್ಲ.

* ಬಾತ್ ರೂಮ್ ಬಳಿ ಬಳಸುವ ಮ್ಯಾಟ್ ಕಡ್ಡಾಯವಾಗಿ ನೀರು ಹೀರುವ ಗುಣ ಹೊಂದಿರಲೇ ಬೇಕು. ಇಲ್ಲದೆ ಹೋದರೆ ಅದು ನಿಷ್ಪ್ರಯೋಜಕ.

ಮತ್ತೊಂದು ಮಹತ್ವದ ವಿಚಾರ ಅಂದರೆ ಬಾತ್ ರೂಮ್ ಹೊರಗಿನ ಮ್ಯಾಟ್ ಕಾಲಿಟ್ಟರೆ ಜಾರುವ ಹಾಗೆ ಇರಬಾರದು. ಆದಷ್ಟು ಕಾಟನ್ ಅಥವಾ ಮೃದುವಾದ ಬಟ್ಟೆಯಿಂದ ಕೂಡಿರುವುದು ಸೂಕ್ತ. ಮಕ್ಕಳು ಹಾಗೂ ವಯಸ್ಸಾದವರು ಇರುವ ಮನೆಯಲ್ಲಿ ಬಾತ್ ನ ಹೊರಗೆ ಹಾಕುವ ಮ್ಯಾಟ್ ನಲ್ಲಿ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.

* ಇನ್ನೂ ಅಡುಗೆ ಮನೆಯಲ್ಲೊಂದು ಮ್ಯಾಟ್ ಬಳಸುವುದಾದರೆ ಸ್ವಲ್ಪ ಗಟ್ಟಯಾದ, ದಪ್ಪ ಹೆಣಿಗೆ ಇರುವ ಮ್ಯಾಟ್ ಇಲ್ಲಿ ಸೂಕ್ತ. ಅಡುಗೆ ಮನೆಯಲ್ಲಿ ಹಸಿ ತ್ಯಾಜ್ಯ ಹೆಚ್ಚಾಗಿ ಇರುವುದರಿಂದ ತೆಳುವಾದ ಮ್ಯಾಟ್ ಗಳು ಬಹಳ ಬೇಗ ಕೊಳೆಯಾಗಿಬಿಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read