ಇಯರ್ ಫೋನ್ ಬಳಸುವ ಮುನ್ನ ಇರಲಿ ಎಚ್ಚರ….!

ಕೈನಲ್ಲೊಂದು ಸ್ಮಾರ್ಟ್ ಫೋನ್, ಕಿವಿಗೆ ಇಯರ್ ಫೋನ್. ಮಲಗುವಾಗಲೂ ಹಾಡು ಕೇಳುವ ಅಭ್ಯಾಸ ಕೆಲವರಿಗಿರುತ್ತೆ. ಸದಾ ಇಯರ್ ಫೋನ್ ಹಾಕಿಕೊಂಡಿರುವವರೂ ಇದ್ದಾರೆ.

ನೀವೂ ಇವರಲ್ಲಿ ಒಬ್ಬರಾಗಿದ್ದರೆ ಇಂದಿನಿಂದಲೇ ಈ ಹವ್ಯಾಸ ಬಿಟ್ಟುಬಿಡಿ. ತುಂಬಾ ಸಮಯ ಇಯರ್ ಫೋನ್ ಬಳಸೋದ್ರಿಂದ ಕಿವಿಗೆ ಅಪಾಯ ತಪ್ಪಿದ್ದಲ್ಲ. ಅನೇಕ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.

ಇಯರ್ ಫೋನ್ ಬಳಕೆಯಿಂದ ಕೇಳುವ ಕ್ಷಮತೆ ಕಡಿಮೆಯಾಗುತ್ತದೆ. ಸೌಂಡ್ ಜಾಸ್ತಿ ಇಟ್ಟುಕೊಂಡು ಕೇಳುವುದರಿಂದ ಕಿವಿ ಹಾಳಾಗುತ್ತದೆ. ಕಿವಿಯ ಪದರ ಹಾಳಾಗಿ ಸಂಪೂರ್ಣ ಕಿವುಡಾಗುವ ಸಾಧ್ಯತೆ ಇರುತ್ತದೆ.

ಇಯರ್ ಫೋನ್ ಮೂಲಕ ತುಂಬಾ ಸಮಯ ಹಾಡುಗಳನ್ನು ಕೇಳುವುದರಿಂದ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.

ಇಯರ್ ಫೋನ್ ಬಳಕೆಯಿಂದ ಕಿವಿಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ. ಬೇರೆಯವರು ಬಳಸಿದ ಇಯರ್ ಫೋನ್ ಸ್ವಚ್ಛಗೊಳಿಸದೆ ನಾವು ಬಳಸುವುದರಿಂದ ಇನ್ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಜೋರಾದ ಧ್ವನಿಯಲ್ಲಿ ಹಾಡು ಕೇಳುವುದರಿಂದ ಹೃದಯ ರೋಗ ಕಾಡುವುದಲ್ಲದೆ ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read