ಪೇಪರ್ ನಲ್ಲಿ ಸುತ್ತಿದ ಆಹಾರ ಸೇವಿಸುವ ಮುನ್ನಇರಲಿ ಎಚ್ಚರ….!

Is wrapping food in a newspaper healthy? - Quoraಸಮೋಸಾ ಇರಲಿ, ಪಕೋಡಾ ಇರಲಿ ಎಲ್ಲ ರೀತಿಯ ಆಹಾರವನ್ನು ಪೇಪರ್ ನಲ್ಲಿ ಕಟ್ಟಿಕೊಡಲಾಗುತ್ತದೆ. ಪೇಪರ್ ನಲ್ಲಿ ಸುತ್ತಿಟ್ಟ ಆಹಾರವನ್ನು ನಾವು ತಿನ್ನುತ್ತೇವೆ.

ಇದು ಎಷ್ಟು ಸರಿ? ಎಷ್ಟು ತಪ್ಪು ಎಂಬುದನ್ನು ನಾವು ಯೋಚನೆ ಮಾಡೋದಿಲ್ಲ. ಬಹುತೇಕ ಅಂಗಡಿ ಮಾಲೀಕರು ಆಹಾರ ಪಾರ್ಸಲ್ ಗೆ ಪೇಪರ್ ಬಳಸ್ತಾರೆ. ಜೊತೆಗೆ ಕೈ ಕ್ಲೀನ್ ಮಾಡಲು ಕೂಡ ಪೇಪರ್ ಇಟ್ಟಿರುತ್ತಾರೆ.

ಸಾಮಾನ್ಯವಾಗಿ ಪೇಪರ್ ಗೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇಂಕ್ ಗಟ್ಟಿಯಾಗಿರಲು ಕೂಡ ರಾಸಾಯನಿಕ ಬಳಸಲಾಗುತ್ತದೆ. ಈ ರಾಸಾಯನಿಕ ಆಹಾರಕ್ಕೆ ಸೇರುತ್ತದೆ. ಅದ್ರಲ್ಲೂ ಬಿಸಿ ಆಹಾರವನ್ನು ಪೇಪರ್ ಗೆ ಹಾಕಿದಾಗ ಬಯೋಆಕ್ಟಿವ್ ಅಂಶಗಳು ಸಕ್ರಿಯವಾಗಿರುತ್ತವೆ.

ಪದೇ ಪದೇ ಪೇಪರ್ ನಲ್ಲಿರುವ ರಾಸಾಯನಿಕ ಹೊಟ್ಟೆ ಸೇರುವುದ್ರಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ಖಾಯಿಲೆ ಕಾಡುತ್ತದೆ. ಹಾಗಾಗಿ ಎಚ್ಚರವಾಗಿರಿ, ಆದಷ್ಟು ಪೇಪರ್ ಬಳಕೆ ಕೈಬಿಟ್ಟು ಬೇರೆ ವಿಧಾನ ಅನುಸರಿಸಿ. ನಿಮ್ಮವರಿಗೂ ಸಲಹೆ ನೀಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read