BREAKING : ‘BCCI’ ಯಿಂದ ‘ಏಕದಿನ ವಿಶ್ವಕಪ್’ ಗೆ ಬಲಿಷ್ಟ ಭಾರತ ತಂಡ ಪ್ರಕಟ |ICC World Cup 2023

ನವದೆಹಲಿ: 2023 ರ ಏಕದಿನ ವಿಶ್ವಕಪ್ ಗಾಗಿ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಹದಿಮೂರನೇ ಆವೃತ್ತಿಯ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ.

ಈ ಹಿಂದೆ ಮೂರು ಬಾರಿ ವಿಶ್ವಕಪ್ ಆತಿಥ್ಯ ವಹಿಸಿದ್ದ ಭಾರತ ಇದೇ ಮೊದಲ ಬಾರಿಗೆ ಏಕಾಂಗಿಯಾಗಿ ಆತಿಥ್ಯ ವಹಿಸಲಿದೆ. ೨೦೧೧ ರ ನಂತರ ಮೊದಲ ಬಾರಿಗೆ ಪಂದ್ಯಾವಳಿ ಭಾರತಕ್ಕೆ ಮರಳುತ್ತಿದೆ. ಏಕದಿನ ವಿಶ್ವಕಪ್ ಹೈದರಾಬಾದ್, ಅಹಮದಾಬಾದ್, ಧರ್ಮಶಾಲಾ, ದೆಹಲಿ, ಚೆನ್ನೈ, ಲಕ್ನೋ, ಪುಣೆ, ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ. ಗುವಾಹಟಿ ಮತ್ತು ತಿರುವನಂತಪುರಂ ಅಭ್ಯಾಸ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಐಸಿಸಿ ವಿಶ್ವಕಪ್ 2023: ಭಾರತ ತಂಡ

ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ(ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

https://twitter.com/BCCI/status/1698971853673713707

2023ರ ಐಸಿಸಿ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ವೇಳಾಪಟ್ಟಿ
ಅಕ್ಟೋಬರ್ 8: ಭಾರತ-ಆಸ್ಟ್ರೇಲಿಯಾ, ಚೆನ್ನೈ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 11: ಭಾರತ-ಅಫ್ಘಾನಿಸ್ತಾನ, ನವದೆಹಲಿ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 14: ಭಾರತ-ಪಾಕಿಸ್ತಾನ, ಅಹಮದಾಬಾದ್, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 19: ಭಾರತ-ಬಾಂಗ್ಲಾದೇಶ, ಪುಣೆ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 22: ಭಾರತ-ನ್ಯೂಜಿಲೆಂಡ್, ಧರ್ಮಶಾಲಾ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 29: ಭಾರತ-ಇಂಗ್ಲೆಂಡ್, ಲಕ್ನೋ, ಮಧ್ಯಾಹ್ನ 2 ಗಂಟೆ
ನವೆಂಬರ್ 2: ಭಾರತ-ಶ್ರೀಲಂಕಾ, ಮುಂಬೈ, ಮಧ್ಯಾಹ್ನ 2 ಗಂಟೆ
ನವೆಂಬರ್ 5: ಭಾರತ-ದಕ್ಷಿಣ ಆಫ್ರಿಕಾ, ಕೋಲ್ಕತಾ, ಮಧ್ಯಾಹ್ನ 2 ಗಂಟೆ
ನವೆಂಬರ್ 12: ಭಾರತ-ನೆದರ್ಲ್ಯಾಂಡ್ಸ್, ಬೆಂಗಳೂರು, ಮಧ್ಯಾಹ್ನ 2 ಗಂಟೆ

 

 

 

 

 

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read