ಮಂತ್ರಿ ಮಾಲ್ ಗೆ ಬಿಬಿಎಂಪಿ ಶಾಕ್; ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ‘ಲಾಕ್’

ಬರೋಬ್ಬರಿ ಐವತ್ತು ಕೋಟಿ ರೂಪಾಯಿಗಳಿಗಿಂತ ಅಧಿಕ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದೆ.

ಬೆಳಿಗ್ಗೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳ ತಂಡ, ಮಂತ್ರಿ ಮಾಲ್ ಗೆ ಬೀಗ ಹಾಕಿದ್ದು, ಹೀಗಾಗಿ ಕೆಲಸಕ್ಕಾಗಿ ಆಗಮಿಸಿದ್ದ ಮಾಲ್ ಸಿಬ್ಬಂದಿ ಹೊರಗಡೆಯೇ ಕಾದು ನಿಂತಿದ್ದಾರೆ.

ಶುಕ್ರವಾರವಾದ ಇಂದು ಬಸವ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇದ್ದು, ನಾಳೆ ಶನಿವಾರ ಹಾಗೂ ನಾಡಿದ್ದು ಭಾನುವಾರ ವಾರಾಂತ್ಯದ ದಿನಗಳಾಗಿವೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ ಗೆ ಆಗಮಿಸಲಿದ್ದು, ಇದೇ ವೇಳೆಯಲ್ಲಿ ಬಿಬಿಎಂಪಿ ಶಾಕ್ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read