ಖಾತೆ ಇಲ್ಲದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಆನ್ಲೈನ್ ಮೂಲಕ ಹೊಸ ಖಾತೆ ಪಡೆಯಲು ಬಿಬಿಎಂಪಿ ಅವಕಾಶ

ಬೆಂಗಳೂರು: ನಿಮ್ಮ ಬಳಿ ಬಿಬಿಎಂಪಿ ಖಾತೆ ಇಲ್ಲವೇ? ಕೈ ಬರಹದ ಖಾತೆ ಕೂಡ ಇಲ್ಲದವರಿಗೆ ಬಿಬಿಎಂಪಿ ಆನ್ಲೈನ್ ಮೂಲಕ ಹೊಸ ಖಾತೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.( https://BBMP.Karnataka.gov.in/NewKhata)

ಹೊಸ ಖಾತೆಗೆ ಅರ್ಜಿ ಸಲ್ಲಿಸಲು ಸರಳ ವಿಧಾನಗಳು

ನಿಮ್ಮ ಮೊಬೈಲ್ ಮತ್ತು ಒಟಿಪಿ ಬಳಸಿಕೊಂಡು ಲಾಗಿನ್ ಆಗಿರಿ

ಕ್ರಯ ನೋಂದಾಯಿತ ಪತ್ರದ ಸಂಖ್ಯೆಯನ್ನು ನಮೂದಿಸಿ(ಉಪ ನೋಂದಣಾಧಿಕಾರಿಯಿಂದ ವಿದ್ಯುನ್ಮಾನವಾಗಿ ಪಡೆಯಲಾಗುವುದು)

ಆಧಾರ್ ಪರಿಶೀಲನೆ

ಸ್ವತ್ತಿನ ಋಣಭಾರ ಪ್ರಮಾಣ ಪತ್ರ

ಬೆಸ್ಕಾಂ ಐಡಿ

ಸ್ವತ್ತಿನ ಛಾಯಾಚಿತ್ರ

ತಹಲ್ ವರೆಗಿನ ಸ್ವತ್ತಿನ ತೆರಿಗೆಯನ್ನು ಪಾವತಿಸಿ

ನಿಮ್ಮ ಮಾಹಿತಿಯನ್ನು ಪರಿಶೀಲಿಸಿದ ನಂತರ ಹೊಸ ಖಾತೆಯನ್ನು ಆನ್ಲೈನ್ ಮೂಲಕ ವಿತರಿಸಲಾಗುತ್ತದೆ.

ಒಂದು ವೇಳೆ ನೀವು ಈಗಾಗಲೇ ಕೈ ಬರಹದ ಖಾತೆ ಹೊಂದಿದ್ದಲ್ಲಿ ಹೊಸ ಖಾತೆಗಳಿಗೆ ಅರ್ಜಿ ಸಲ್ಲಿಸಕೂಡದು. ಒಂದು ವೇಳೆ ಈ ರೀತಿ ಮಾಡಿದಲ್ಲಿ ತಮ್ಮನ್ನು ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು. ಈಗಾಗಲೇ ಇರುವ ಕೈ ಬರಹ ಖಾತೆಗೆ ಇ- ಖಾತೆಯನ್ನು ಪಡೆದುಕೊಳ್ಳಬಹುದು(https://BBMPeAasthi.Karnataka.gov.in)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read