ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಬಿಬಿಎಂಪಿ ಮತ್ತೆ ಅಸ್ತಿತ್ವಕ್ಕೆ, 5 ಪಾಲಿಕೆ ರದ್ದು: ಅಶೋಕ್

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತಂದಿರುವ ಐದು ಮಹಾನಗರ ಪಾಲಿಕೆಗಳು ತಾತ್ಕಾಲಿಕವಾಗಿದ್ದು, ಬಿಜೆಪಿ ಗೆದ್ದ ಬಳಿಕ ಐದು ಹೊಸ ಪಾಲಿಕೆಗಳನ್ನು ರದ್ದು ಮಾಡಲಾಗುವುದು. ಬಿಪಿಎಂಪಿಯನ್ನು ಮತ್ತೆ ಅಸ್ತಿತ್ವಕ್ಕೆ ತರಲಾಗುವುದು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಒಂದೇ ಮಹಾನಗರ ಪಾಲಿಕೆ ಮಾಡುತ್ತೇವೆ. ಬಿಬಿಎಂಪಿಯನ್ನು ಮತ್ತೆ ಅಸ್ತಿತ್ವಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನವರು ಬರಿ ಹೋಳು ಮಾಡುತ್ತಿದ್ದಾರೆ. ಓಳು ಬಿಡುತ್ತಿದ್ದಾರೆ. 198 ವಾರ್ಡ್ ಗಳಲ್ಲಿ ಶೇಕಡ 90ರಷ್ಟು ಇಂಜಿನಿಯರ್ ಗಳೇ ಇಲ್ಲ. ಇನ್ನೂ 500 ವಾರ್ಡ್ ಗಳನ್ನು ಮಾಡಲು ಹೊರಟಿದ್ದಾರೆ. ಈಗಿರುವ ಪಾಲಿಕೆಯ ಪಾಪರ್ ಆಗಿದೆ. 1,000ಕ್ಕೂ ಅಧಿಕ ನೇಮಕಾತಿ ಮಾಡಿದರೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಶಂಕುಸ್ಥಾಪನೆಯಾದ ಕಾಮಗಾರಿಗಳೇ ಸ್ಥಗಿತಗೊಂಡಿವೆ. ಇಂತಹ ಸ್ಥಿತಿಯಲ್ಲಿ ಆಡಳಿತ ನಡೆಯುವುದಿಲ್ಲ. ಬೆಂಗಳೂರಿನಲ್ಲಿ 5000 ಕೋಟಿ ರೂ. ಬಿಡುಗಡೆಯಾಗಿದ್ದರೂ ರಸ್ತೆ ಅಭಿವೃದ್ಧಿ ಮಾಡಿಲ್ಲ. ಶುದ್ಧ ನೀರಿನ ಘಟಕದ 20 ಲೀಟರ್ ನೀರಿನ ದರವನ್ನು 5 ರಿಂದ 10 ರೂ.ಗೆ ಹೆಚ್ಚಳ ಮಾಡಲಾಗಿದೆ. ಹಾಲಿನ ದರ, ತೈಲ ದರ ಏರಿಕೆ ಮಾಡಿದ್ದು, ಹೊಸದಾಗಿ ಕಸಕ್ಕೂ ಶುಲ್ಕ ಹೇರಲಾಗಿದೆ. ಇನ್ನು ಗಾಳಿಗೆ ಶುಲ್ಕ ತಂದರೆ ಉಪಮುಖ್ಯಮಂತ್ರಿಗಳ ಬ್ರಾಂಡ್ ಬೆಂಗಳೂರು ಸಾಕಾರವಾಗುತ್ತದೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read