ಬಿಸಿ ನೀರಿನಿಂದ ತಲೆಸ್ನಾನ ಮಾಡಿದ್ರೆ ಕಾಡಬಹುದು ಈ ಸಮಸ್ಯೆ….!

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಹಿತವಾಗಿರುತ್ತದೆ. ಬಿಸಿ ನೀರಿನ ಶವರ್ ತೆಗೆದುಕೊಂಡರೆ ಇಡೀ ದಿನದ ಆಯಾಸ ಹಾರಿಹೋಗುತ್ತದೆ. ಒಳ್ಳೆ ನಿದ್ರೆಗೂ ಇದು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಬಿಸಿನೀರಿನಿಂದ ಕೂದಲು ತೊಳೆಯುವವರೇ ಹೆಚ್ಚು. ಇದು ನಿಮ್ಮ ಕೂದಲಿಗೆ ಹಾನಿಯನ್ನು ಉಂಟುಮಾಡಬಹುದು. ಬಿಸಿನೀರಿನಿಂದ ತಲೆಸ್ನಾನ ಮಾಡುವುದರಿಂದ ಅನೇಕ ದುಷ್ಪರಿಣಾಮಗಳಿವೆ.

ಕೂದಲು ದುರ್ಬಲವಾಗುವುದು

ಬಿಸಿನೀರಿನ ಸ್ನಾನವು ಬಹಳ ಚೇತೋಹಾರಿಯಾಗಿರುತ್ತದೆ. ಆದರೆ ಬಿಸಿ ನೀರಲ್ಲಿ ಕೂದಲು ತೊಳೆಯುವುದರಿಂದ ಅದು ದುರ್ಬಲವಾಗಬಹುದು. ಕೂದಲಿನಲ್ಲಿರುವ ಬಲವೇ ಹೊರಟುಹೋಗುತ್ತದೆ.

ಕೂದಲಿನಲ್ಲಿ ಡ್ರೈನೆಸ್‌

ತಲೆಸ್ನಾನಕ್ಕೆ ಬಿಸಿ ನೀರನ್ನು ಬಳಸುವುದರಿಂದ ಕೂದಲು ಉದುರುತ್ತದೆ. ಇದು ಕೂದಲಿನ ತೇವಾಂಶವನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ. ಕೂದಲು ಒಣಗಿದಂತಾಗಿ ಹೊಳಪನ್ನೇ ಕಳೆದುಕೊಳ್ಳುತ್ತದೆ.

ಉಗುರು ಬೆಚ್ಚಗಿನ ನೀರು ಬಳಸಿ

ಕೂದಲನ್ನು ಬಿಸಿ ನೀರಿನಿಂದ ತೊಳೆಯುವುದರಿಂದ ಸ್ಕಾಲ್ಪ್‌ಗೆ ಹಾನಿಯಾಗಬಹುದು. ಇದರಿಂದ ಕೂದಲು ಸಂಪೂರ್ಣವಾಗಿ ಹಾಳಾಗುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ಮಾತ್ರ ತಲೆಸ್ನಾನ ಮಾಡಬೇಕು.

ಕೂದಲು ಉದುರುವಿಕೆ

ಪ್ರತಿದಿನ ಬಿಸಿನೀರಿನಿಂದ ತಲೆಸ್ನಾನ ಮಾಡುವುದರಿಂದ ಕೂದಲು ಒಣಗಿದಂತಾಗಿ ಕ್ರಮೇಣ ನಿರ್ಜೀವವಾಗುತ್ತದೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.

ಸ್ಕಾಲ್ಪ್‌ಗೆ ಹಾನಿ

ಬಿಸಿನೀರಿನ ಬಳಕೆಯು ತಲೆಬುರುಡೆಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ. ಸ್ಕಾಲ್ಪ್‌ನಲ್ಲಿ ತುರಿಕೆ, ತಲೆಹೊಟ್ಟು, ಕೆಂಪಗಾಗುವುದು ಹೀಗೆ ಅನೇಕ ಸಮಸ್ಯೆಗಳಾಗಬಹುದು. ಆದ್ದರಿಂದ ಯಾವಾಗಲೂ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲೇ ತಲೆಸ್ನಾನ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read