BIG NEWS: ಬರ ಪರಿಹಾರ ಘೋಷಣೆಗೆ ಸರ್ಕಾರದಿಂದ ಕುಂಟು ನೆಪ; ಸಿಎಂಗೆ ಜನರಿಗೆ ಸಾಹಾಯ ಮಾಡುವ ಮನಸಿಲ್ಲ; ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ಹುಬ್ಬಳ್ಳಿ: ನಿಯಮ ಬದಲಾವಣೆ ಎಂಬುದು ಕೇವಲ ಕುಂಟು ನೆಪ. ಬರ ಪರಿಹಾರ ಘೋಷಣೆಗೆ ರಾಜ್ಯ ಸರ್ಕಾರ ಕುಂಟು ನೆಪ ಹೇಳುತ್ತಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಬರ ಘೋಷಣೆ ಸಂಬಂಧ ಹಿಂದಿನಿಂದಲೂ ಇದೇ ನಿಯಮ ಇದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಬರ ಘೋಷಣೆ ಮಾಡಿರಲಿಲ್ಲವೇ? ನಮ್ಮ ಸರ್ಕಾರದ ಅವಧಿಯಲ್ಲಿ ನಾವು ಕೇಂದ್ರ ಸರ್ಕಾರ ಕೊಟ್ಟ ಪರಿಹಾರಕ್ಕಿಂತ ಹೆಚ್ಚು ಪರಿಹಾರ ಘೋಷಿಸಿದ್ದೆವು. ನಾವು ಕಾದುಕೊಂಡು ಕುಳಿತಿರಲಿಲ್ಲ. ಈಗ ರೂಲ್ಸ್ ಬದಲಾವಣೆ ಎಂದು ಹೇಳುತ್ತ ರಾಜ್ಯ ಸರ್ಕಾರ ಕುಂಟು ನೆಪ ಹೇಳುತ್ತಿದೆ. ಸಿಎಂ ಸಿದ್ದರಾಮಯ್ಯನವರಿಗೆ ಜನರಿಗೆ ಸಹಾಯ ಮಾಡುವ ಮನಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಈಗಾಗಲೇ ವಿಪತ್ತು ನಿರ್ವಹಣಾ ಹಣ ಕೇಂದ್ರ ಸರ್ಕಾರದಿಂದ ಬಂದಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿಯೂ ಹಣವಿದೆ. ಆದರೂ ಪರಿಹಾರ ಹಣ ವಿತರಣೆ ಮಾಡುತ್ತಿಲ್ಲ. ಇವರಿಗೆ ಜನರ ಸಂಕಷ್ಟ ಗೊತ್ತಿಲ್ಲ. ಸಮಸ್ಯೆ ಆಲಿಸುವ ಮನಸ್ಸಿಲ್ಲ. ಅದಕ್ಕೆ ಎಲ್ಲವನ್ನೂ ಕೇಂದ್ರ ಸರ್ಕಾರ ವಿರುದ್ಧ ಆರೋಪ ಮಾಡಿ ನಿಯಮ ಬದಲಾವಣೆ ಎಂದು ನೆಪ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ತಕ್ಷಣ ತನ್ನ ಅಧಿಕಾರ ಬಳಕೆ ಮಾಡಿಕೊಂಡು ಬರ ಘೋಷಣೆ ಮಾಡಿ ಬರ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read