ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಉಚ್ಛಾಟನೆ ಮಾಡಲಾಗಿದ್ದು, ಉಚ್ಛಾಟನೆ ಬಳಿಕ ಇದೇ ಮೊದಲ ಬಾರಿಗೆ ಸ್ವಾಮಿಜಿ ಕೂಡಲಸಂಗಮ ಗುರುಪೀಠಕ್ಕೆ ಭೇಟಿ ನೀಡಿದ್ದಾರೆ.
ಕೂಡಲಸಂಗಮಕ್ಕೆ ಆಗಮಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಬಸವಣ್ಣನ ದರ್ಶನ ಪಡೆದರು. ಬಳಿಕ ಐಕ್ಯ ಮಂಟಪದ ಆವರಣದಲ್ಲಿರುವ ದೊಡ್ಡ ಆಲದ ಮರದ ಕೆಳಗೆ ಭಕ್ತರೊಂದಿಗೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸ್ವಾಮೀಜಿ, ನನ್ನ ಉಚ್ಛಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಪೀಠಕ್ಕೂ, ಟ್ರಸ್ಟ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಕಲ್ಲು ಮಣ್ಣಿನಲ್ಲಿ ಪೀಠ ಕಟ್ಟಿಲ್ಲ. ಭಕ್ತರ ನಿರ್ಧಾರ, ತೀರ್ಮಾನವೇ ಅಂತಿಮ. ಅವರ ನಿರ್ಧಾರವೇ ನನ್ನ ನಿರ್ಧಾರ. ಪಂಚ್ಜಮಸಾಲಿ ಪೀಠದ ಭಕ್ತರ ಹೃದಯವೇ ನನಗೆ ಸಿಂಹಾಸನ ಹಾಗೂ ಕಿರೀಟ ಎಂದು ಹೇಳಿದರು.