ಡಿ.ಕೆ.ಶಿವಕುಮಾರ್ ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ವಿಚಾರ; ಸಿಬಿಐ ಮುಂದಿನ ನಡೆ ಮೇಲೆ ನನ್ನ ನಿರ್ಧಾರ ನಿಂತಿದೆ ಎಂದ ಯತ್ನಾಳ್

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ವಾಪಾಸ್ ಪಡೆಯುವ ಸರ್ಕಾರದ ಕ್ರಮ ಎತ್ತಿಹಿಡಿದು ಹೈಕೋರ್ಟ್ ಆದೇಶ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಬಿಐ ಮುಂದಿನ ನಡೆ ಮೇಲೆ ನನ್ನ ನಿರ್ಧಾರ ನಿಂತಿದೆ ಎಂದಿದ್ದಾರೆ.

ಹೈಕೋರ್ಟ್ ರಿಟ್ ಮೇಲ್ಮನವಿ ಹಾಗೂ ರಿಟ್ ಅರ್ಜಿಯನ್ನು ಹಿಂಪಡೆಯಲು ಮೇಲ್ಮನವಿದಾರರಿಗೆ ಅನುಮತಿ ನೀಡಿದೆ. ಅನುಮತಿ ಹಿಂಪಡೆಯುವ ಸವಾಲನ್ನು ಪೀಠ ವಿಚಾರಣೆ ನಡೆಸಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅನುಮತಿ ವಾಪಾಸ್ ಪಡೆಯುವ ಸರ್ಕಾರದ ನಿರ್ಧಾರವನ್ನು ಸಿಬಿಐ ಪ್ರಶ್ನಿಸಬೇಕು. ಇಲ್ಲವಾದಲ್ಲಿ ನನ್ನ ಕಾನೂನು ತಂಡವನ್ನು ಸಂಪರ್ಕಿಸಿ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದಕ್ಕೆ ಯಾರ್ಯಾರಿಗೆ ಯಾವ ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯಾರು ಯಾರಿಗೆ ಉತ್ತರ ಕೊಡುತ್ತಾರೋ ಕಾಲ ನಿರ್ಣಯ ಮಾಡುತ್ತದೆ ಎಂದು ಟಾಂಗ್ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read