Shivamogga : ರಾಗಿಗುಡ್ಡ ಗಲಭೆಯಲ್ಲಿ ನಿಷೇಧಿತ ‘PFI’ ಕಾರ್ಯಕರ್ತರ ಕೈವಾಡ : ಸ್ಪೋಟಕ ಮಾಹಿತಿ ಬಯಲು

ಶಿವಮೊಗ್ಗ : ಶಿವಮೊಗ್ಗದ ರಾಗಿಗುಡ್ಡ ಗಲಭೆಯಲ್ಲಿ ನಿಷೇಧಿತ PFI ಕಾರ್ಯಕರ್ತರ ಕೈವಾಡವಿದೆ ಎನ್ನಲಾಗಿದ್ದು, ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದೆ .

ಹೌದು. ಪೊಲೀಸರ ತನಿಖೆ ವೇಳೆ ನಿಷೇಧಿತ ಪಿಎಫ್ ಐ ಕಾರ್ಯಕರ್ತರ ಹೆಸರು ಕೇಳಿ ಬಂದಿದೆ ಎನ್ನಲಾಗಿದ್ದು, ತನಿಖೆ ವೇಳೆ 8 ಮಂದಿ ಪಿಎಫ್ ಐ ಕಾರ್ಯಕರ್ತರ ಹೆಸರು ಬಹಿರಂಗಗೊಂಡಿದೆ.

ಅಕ್ಟೋಬರ್ 1ರಂದು ಭಾನುವಾರ ರಾಗಿಗುಡ್ಡದಲ್ಲಿ ನಡೆದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಲಾಗಿತ್ತು. ಹಿಂದೂಗಳ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಾನಿ ಮಾಡಲಾಗಿತ್ತು. ಪ್ರಕರಣ ರಾಜ್ಯದಲ್ಲಿ ಭಾರಿ ಚರ್ಚೆಯಾಗಿತ್ತು.

ಮುಬಾರಕ್, ಇಮ್ರಾನ್, ಅಬ್ದುಲ್ ಮೌಸಿನ್, ನಬಿ, , ಹಿದಾಯತ್, ಇರ್ಫಾನ್, ಅನ್ವರ್ ಈ ಎಂಟು ಮಂದಿ ನಿಷೇಧಿತ ಪಿಎಫ್ ಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅಲ್ಲದೇ ರಾಗಿಗುಡ್ಡದಲ್ಲಿ ಗಲಭೆ ನಡೆಯಲು ಯುವಕರಿಗೆ ಪ್ರಚೋದನೆ ನೀಡಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆ ತನಿಖೆಯನ್ನು ಎ ಐ ಎ ಗೆ ನೀಡುವಂತೆ ಆಗ್ರಹ ಕೇಳಿಬಂದಿದೆ. ನಿಷೇಧಿತ ಪಿಎಫ್ಐ ಕಾರ್ಯಕರ್ತರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read